Wednesday, January 15, 2025

ಈಡಿಗ ಸಮಾವೇಶದ ವಿರುದ್ದ ಕೆರಳಿದ ಪರಿಷತ್​ ಸದಸ್ಯ ಬಿ.ಕೆ ಹರಿಪ್ರಸಾದ್

ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ಈಡಿಗ ಸಮಾವೇಶ ನಡೆಸುತ್ತಿರುವುದರ ವಿರುದ್ಧ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್​ ಮತ್ತೆ ಕೆರಳಿ ಕೆಂಡವಾಗಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರಾಜಕೀಯ ಕುತಂತ್ರಕ್ಕೆ ನಾನು ಬಗ್ಗಲ್ಲ. ಸಿದ್ದರಾಮಯ್ಯ 2006ರಲ್ಲಿ ಪಕ್ಷಕ್ಕೆ ಬಂದಿದ್ದು, ಅಷ್ಟೇನು ಪರಿಚಯವಿಲ್ಲ. ಯಾವ ಕಾರಣಕ್ಕೆ ಅಧಿಕಾರಕ್ಕೆ ಬಂದಿದ್ದೇವೆ, ಅದನ್ನು ಈಡೇರಿಸಬೇಕು ಎಂದು ಬಿ.ಕೆ. ಹರಿಪ್ರಸಾದ್ ಮತ್ತೆ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ರವೀಂದ್ರ ಕಲಾಕ್ಷೇ‌ತ್ರದ ಆವರಣದಲ್ಲಿ ಇಂದು-ನಾಳೆ ‘ನಮ್ಮ ಜಾತ್ರೆ’

ದೊಡ್ಡ ದೊಡ್ಡ ನಾಯಕರು ಈಡಿಗ ಸಂಘವನ್ನು ಕಟ್ಟಿದ್ದಾರೆ. ಆದರೆ ಇತ್ತೀಚೆಗೆ ಬಂದವರು ಸಮಾಜದಲ್ಲಿ ಏನು ಮಾಡಿದ್ದಾರೆ. ರಾಜಕೀಯ ಕುತಂತ್ರದ ಸಮಾವೇಶ, ಇದರಿಂದ ಒಳ್ಳೆಯದಾಗಲ್ಲ. ಗುರುನಾರಾಯಣ ಅಧ್ಯಯನ ಪೀಠಕ್ಕೆ ಅನುದಾನವನ್ನು ಕೊಟ್ಟಿಲ್ಲ. ಸಮಾಜದ ಹಿತದೃಷ್ಟಿಯಿಂದ ಏನು ಮಾಡಿದ್ದಾರೆಂದು ಹೇಳಬೇಕು.

ರಾಜಕೀಯ ಪ್ರೇರಿತ ಸಮಾವೇಶದಲ್ಲಿ ನಾವು ಭಾಗಿಯಾಗುವುದಿಲ್ಲ. ಪ್ರಣಾವನಂದ ಸ್ವಾಮೀಜಿ ಉಪವಾಸ ಸತ್ಯಾಗ್ರಹಕ್ಕೆ ಶುಭವಾಗಲಿ ಎಂದು ಹೇಳಿದರು.

RELATED ARTICLES

Related Articles

TRENDING ARTICLES