Monday, December 23, 2024

ರವೀಂದ್ರ ಕಲಾಕ್ಷೇ‌ತ್ರದ ಆವರಣದಲ್ಲಿ ಇಂದು-ನಾಳೆ ‘ನಮ್ಮ ಜಾತ್ರೆ’

ಬೆಂಗಳೂರು: ಕನ್ನಡ & ಸಂಸ್ಕೃತಿ ಇಲಾಖೆಯ ವತಿಯಿಂದ ಇಂದು ಮತ್ತು ನಾಳೆ ರವೀಂದ್ರ ಕಲಾಕ್ಷೇತ್ರದಲ್ಲಿ ನಮ್ಮ ಜಾತ್ರೆ ಕಾರ್ಯಕ್ರಮ ಹಮ್ಮಿಕೊಂಡಿದೆ.

ಲೀಲಾವತಿ ನಿಧನದ ಹಿನ್ನೆಲೆ ನಿನ್ನೆಯ ಕಾರ್ಯಕ್ರಮ ಮುಂದೂಡಲಾಗಿತ್ತು.ಅನ್ ಬಾಕ್ಸಿಂಗ್ ಬಿಎಲ್ಆರ್‌ ಹಬ್ಬ’ದ ಅಡಿ ಈ ಜಾತ್ರೆ ಆಯೋಜಿಸಲಾಗುತ್ತಿದೆ. ಭಾನುವಾರ ಬೆಳಿಗ್ಗೆ 9.30ಕ್ಕೆ ವಿಧಾನಸೌಧದಿಂದ ರವೀಂದ್ರ ಕಲಾಕ್ಷೇತ್ರದವರೆಗೆ ಕಲಾ ತಂಡಗಳ ಮೆರವಣಿಗೆ ನಡೆಯಲಿದ್ದು, ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.

ಆನೆ, ರಥ, ಹೂವಿನ ಪಲ್ಲಕ್ಕಿ ಹಾಗೂ ಎತ್ತಿನಗಾಡಿಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಎರಡು ದಿನಗಳ ಜಾತ್ರೆ ಬೆಳಿಗ್ಗೆ 10ರಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ ಎಂದು ಇಲಾಖೆ ನಿರ್ದೇಶಕಿ ಧರಣಿದೇವಿ ಮಾಲಗತ್ತಿ ತಿಳಿಸಿದ್ದಾರೆ.

ಇದನ್ನೂ ಓದಿ: ಕಲಬುರಗಿ ವಕೀಲನ ಹತ್ಯೆ ಪ್ರಕರಣ; ಪ್ರಮುಖ ಆರೋಪಿ ಅರೆಸ್ಟ್​​

ಎರಡು ದಿನಗಳ ಈ ಜಾತ್ರೆಯು ಹಲವು ವೈಶಿಷ್ಟ್ಯ ಒಳಗೊಂಡಿದೆ. ನೈಜ ಜಾನಪದ ಸಂಪ್ರದಾಯವನ್ನು ಈ ಜಾತ್ರೆಯಲ್ಲಿ ಅನುಭವಿಸಬಹುದಾಗಿದೆ. ಎರಡು ನೂರು ಕಲಾವಿದರಿಂದ ಜಾನದಪ ನೃತ್ಯ ಪ್ರದರ್ಶನ ನಡೆಯಲಿದೆ. ಕರಕುಶಲ ಮಳಿಗೆಗಳು ಜಾತ್ರೆಯಲ್ಲಿ ಇರಲಿದ್ದು, ತಯಾರಕರಿಂದ ನೇರವಾಗಿ ಕರಕುಶಲ ವಸ್ತುಗಳನ್ನು ಖರೀದಿಸಬಹುದು. ಉಚಿತವಾಗಿ ಎತ್ತಿನ ಗಾಡಿಯ ಸವಾರಿಯನ್ನೂ ಅನುಭವಿಸಬಹುದು. ಸ್ಥಳೀಯ ಆಹಾರ ವೈವಿಧ್ಯತೆಯನ್ನು ಆಸ್ವಾದಿಸಬಹುದು ಎಂದು ಹೇಳಿದ್ದಾರೆ.

ಸಂಜೆ 6 ಗಂಟೆಯಿಂದ ಸಂಸ ಬಯಲು ರಂಗಮಂದಿರದಲ್ಲಿ ಬೊಂಬೆಯಾಟ, ತೊಗಲು ಗೊಂಬೆಯಾಟ, ಸೂತ್ರದ ಗೊಂಬೆಯಾಟ ಪ್ರದರ್ಶನಗಳು ನಡೆಯಲಿವೆ. ನಮ್ಮ ಹಳ್ಳಿ ಜೀವನ, ಆಚರಣೆಯನ್ನು ಈ ಜಾತ್ರೆಯಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ.

RELATED ARTICLES

Related Articles

TRENDING ARTICLES