Monday, December 23, 2024

ಬಿಎಸ್‌ಪಿ ಗೆ ನೂತನ ಉತ್ತರಾಧಿಕಾರಿ ನೇಮಿಸಿದ ಮಾಯಾವತಿ

ಬೆಂಗಳೂರು:  ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರು ಸೋದರಳಿಯ ಆಕಾಶ್ ಆನಂದ್ ಅವರನ್ನು ತಮ್ಮ ರಾಜಕೀಯ ಉತ್ತರಾಧಿಕಾರಿ ಎಂದು ಹೆಸರಿಸಿದ್ದಾರೆ.
ಲಖನೌದಲ್ಲಿ ಇಂದು ನಡೆದ ಪಕ್ಷದ ಪ್ರಮುಖ ಸಭೆಯಲ್ಲಿ ಹಿರಿಯ ನಾಯಕ ಈ ಘೋಷಣೆ ಮಾಡಿದ್ದಾರೆ.

ಆಕಾಶ್ ಆನಂದ್ ಅವರು ಮಾಯಾವತಿ ಅವರ ಕಿರಿಯ ಸಹೋದರನ ಪುತ್ರನಾಗಿದ್ದು, ಈ ಮೊದಲು ಮಾಯಾವತಿ ಅವರ ನಂತರದ ಬಿಎಸ್‌ಪಿಯ ಎಲ್ಲ ಕಾರ್ಯಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು.

2016 ರಲ್ಲಿ ಬಿಎಸ್​ಪಿಗೆ ಸೇರ್ಪಡೆಗೊಂಡ ಆನಂದ್ ಅವರು 2019 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಪಕ್ಷದ ಸ್ಟಾರ್ ಪ್ರಚಾರಕರಲ್ಲಿ ಒಬ್ಬರಾಗಿದ್ದರು.

2019 ರಲ್ಲಿ ಮಾಯಾವತಿಯವರ ಲೋಕಸಭಾ ಪ್ರಚಾರದ ಸಮಯದಲ್ಲಿ ಪ್ರಮುಖ ಆಕಾಶ್ ಆನಂದ್ ಈ ಹಿಂದೆ ಪಕ್ಷದ ರಾಷ್ಟ್ರೀಯ ಸಂಯೋಜಕರಾಗಿದ್ದರು.

ಇದನ್ನೂ ಓದಿ: ಈಡಿಗ ಸಮಾವೇಶದ ವಿರುದ್ದ ಕೆರಳಿದ ಪರಿಷತ್​ ಸದಸ್ಯ ಬಿ.ಕೆ ಹರಿಪ್ರಸಾದ್

28 ವರ್ಷದ ಆನಂದ್ ಆಕಾಶ್ ಅವರು ಡಾ ಬಿ ಆರ್ ಅಂಬೇಡ್ಕರ್ ಅವರ ಜನ್ಮದಿನದಂದು 2022 ರಲ್ಲಿ ರಾಜಸ್ಥಾನದ ಅಲ್ವಾರ್‌ನಲ್ಲಿ ನಡೆದ 13 ಕಿಮೀ “ಸ್ವಾಭಿಮಾನ್ ಸಂಕಲ್ಪ ಯಾತ್ರೆ “ಯಲ್ಲಿ ಪಾಲ್ಗೊಳ್ಳುವುದರೊಂದಿಗೆ ಅವರ ಗೋಚರತೆಯು ಹೆಚ್ಚಾಗಿ ಕಂಡುಬಂದಿತ್ತು.

2018ರ ರಾಜಸ್ಥಾನ ವಿದಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಆರು ಸ್ಥಾನಗಳನ್ನು ಪಡೆದಿದ್ದ ಬಿಎಸ್‌ಪಿ ಚುನಾವಣಾ ಪ್ರಚಾರದಲ್ಲೂ ಅವರು ಕಾಣಿಸಿಕೊಂಡಿದ್ದರು. 2024ರ ಲೋಕಸಭಾ ಚುನಾವಣೆಗೆ ಕೇವಲ ಐದು ತಿಂಗಳು ಬಾಕಿಯಿರುವ ಅವಧಿಯಲ್ಲಿಯೇ ಇವರ ನೇಮಕ ಪಕ್ಷದ ಕಾರ್ಯತಂತ್ರದಲ್ಲಿ ವೇಗವನ್ನು ಪಡೆದುಕೊಳ್ಳಲಿದೆ ಎಂದು ವರದಿಗಳಾಗಿವೆ.

RELATED ARTICLES

Related Articles

TRENDING ARTICLES