Monday, December 23, 2024

ಕಲಬುರಗಿ ವಕೀಲನ ಹತ್ಯೆ ಪ್ರಕರಣ; ಪ್ರಮುಖ ಆರೋಪಿ ಅರೆಸ್ಟ್​​

ಕಲಬುರಗಿ: ಕಲಬುರಗಿಯಲ್ಲಿ ಹಾಡಹಗಲೇ ವಕೀಲನ ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಮುಖ ಆರೋಪಿಯನ್ನು ಕಲಬುರಗಿಯ ವಿವಿ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ನೀಲಕಂಠ ಪಾಟೀಲ್ಕ ಬಂಧಿತ ಆರೋಪಿ. ನ.7 ರಂದು ಕಲಬುರಗಿಯ ಶ್ರೀ ಗಂಗಾವಿಹಾರ ಅರ್ಪಾಟಮೆಂಟ್ ನಲ್ಲಿ ಹತ್ಯೆಯಾಗಿತ್ತು.  ಹತ್ಯೆಗೆ ಸಂಬಂಧಿಸಿದಂತೆ ಈಗಾಗಲೇ ಮೂವರನ್ನ ಬಂಧಿಸಿರುವ ಪೊಲೀಸರು. ಬಂಧಿತ ಮಲ್ಲಿನಾಥ ನಾಯ್ಕೋಡಿ, ಭಾಗೇಶ, ಅವಣ್ಣ. ಈ ಮೂವರು ಪ್ರಮುಖ ಆರೋಪಿಯ ಪ್ಲಾನ್‌ನಂತೆ ಹತ್ಯೆಗೈದಿದ್ದರು. ಆದ್ರೆ ಪ್ರಮುಖ ಆರೋಪಿಯಾಗಿದ್ದ ನೀಲಕಂಠ ಪಾಟೀಲ್ ಹತ್ಯೆ ಬಳಿಕ ತಲೆಮರೆಸಿಕೊಂಡಿದ್ದ. ಆರೋಪಿಯನ್ನು ವಿಶೇಷ ತಂಡ ರಚನೆ ತಡರಾತ್ರಿ ಆರೋಪಿಯನ್ನು ಬಂಧಿಸಿದ ಖಾಕಿ ಪಡೆ.

ಹತ್ಯೆಗೆ ಕಾರಣ

ವಕೀಲ ಈರಣ್ಣ ಗೌಡನಿಗೆ ಕೋಟ್ಯಂತರ ಬೆಲೆ ಬಾಳು ಜಮೀನು ಇದೆ. ಕಲಬುರಗಿ ನಗರಕ್ಕೆ ಹೊಂದಿಕೊಂಡಂತೆ 12 ಏಕರೆ ಜಮೀನು. ಜಮೀನಿನಲ್ಲಿ ಪಾಲು ಕೇಳಿದ್ದ ಹಂತಕರು. ಆದರೆ ಇವರ ಬೇಡಿಕೆಗೆ ವಿರೋಧಿಸಿದ್ದ ಈರಣ್ಣ ಗೌಡ. ಪಾಲು ಸಿಗಲ್ಲ ಎಂದು ಖಾತ್ರಿಯಾಗ್ತಿದ್ದಂತೆ ಕೊಲೆಗೆ ಸಂಚು ರೂಪಿಸಿದ ಹಂತಕರು. ಈರಣ್ಣಗೌಡ ಸತ್ತರೆ ಜಮೀನಿಗೆ ವಾರಸುದಾರರೇ ಇರಲ್ಲ ಎಂದು ಸ್ಕೆಚ್. ಕೋಟ್ಯಂತರ ರೂಪಾಯಿ ಬೆಲೆಬಾಳುವ ಈರಣ್ಣಗೌಡನ ಜಮೀನಿನ ಮೇಲೆ ಕಣ್ಣಿಟ್ಟು ಹತ್ಯೆ ಮಾಡಿರುವ ಹಂತಕರು.

RELATED ARTICLES

Related Articles

TRENDING ARTICLES