Wednesday, January 22, 2025

ಮಧು ಬಂಗಾರಪ್ಪ ಜೊತೆ BK ಹರಿಪ್ರಸಾದ್​ ಮುಸುಕಿನ ಗುದ್ದಾಟ!

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಮತ್ತು ವಿಧಾನ ಪರಿಷತ್‌ ಸದಸ್ಯ ಬಿಕೆ ಹರಿಪ್ರಸಾದ್‌ ನಡುವಿನ ಜಟಾಪಟಿ ಜೋರಾಗಿದೆ.

ಈ ಜಟಾಪಟಿ ಮಧ್ಯೆ ಈಡಿಗ ಸಮುದಾಯದ ಕಾಂಗ್ರೆಸ್‌ ನಾಯಕರಾದ ಮಧು ಬಂಗಾರಪ್ಪ ಹಾಗೂ ಹರಿಪ್ರಸಾದ್ ನಡುವೆ ಮುಸುಕಿನ ಗುದ್ದಾಟವೂ ಜೋರಾಗಿ ನಡೆಯುತ್ತಿದೆ. ಹಿರಿತನದ ಆಧಾರದಲ್ಲಿ ಬಿ.ಕೆ.ಹರಿಪ್ರಸಾದ್ ಅವರು ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದರು. ಆದರೆ ಮಧು ಬಂಗಾರಪ್ಪ ಅವರನ್ನು ಈಡಿಗ ಕೋಟಾದಲ್ಲಿ ಸಚಿವರನ್ನಾಗಿ ಮಾಡಿ ಸಿದ್ದರಾಮಯ್ಯ ಸಡ್ಡು ಹೊಡೆದಿದ್ದರು.

ಇದನ್ನೂ ಓದಿ: ಈಡಿಗ ಸಮಾವೇಶದ ವಿರುದ್ದ ಕೆರಳಿದ ಪರಿಷತ್​ ಸದಸ್ಯ ಬಿ.ಕೆ ಹರಿಪ್ರಸಾದ್

ನಾನು ರಾಜ್ಯಸಭಾ ಸದಸ್ಯನಾಗಿ ಹಲವು ರಾಜ್ಯಗಳ ಉಸ್ತುವಾರಿಯಾಗಿ ನೇಮಕವಾಗಿದ್ದರೂ ಹಿರಿತನ ಆದ್ಯತೆಯಲ್ಲಿ ಸಿದ್ದರಾಮಯ್ಯನವರು ಸಚಿವ ಸ್ಥಾನ ತಪ್ಪಿಸಿದರು ಎಂಬ ಆಕ್ರೋಶದಲ್ಲಿ ಸಿಎಂ ವಿರುದ್ಧ ಬಿ.ಕೆ.ಹರಿಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ವೇಳೆ ಸಿಎಂ ಪರವಾಗಿ ಮಧು ಬಂಗಾರಪ್ಪ ಬ್ಯಾಟ್‌ ಬೀಸಿದ್ದರು. ಮಧು ಬಂಗಾರಪ್ಪ ಸಿಎಂ ಪರವಾಗಿ ಪ್ರತಿಕ್ರಿಯಿಸಿದ ಬಳಿಕ ಹರಿಪ್ರಸಾದ್‌ ಜೊತೆಗಿನ ಮುಸುಕಿನ ಗುದ್ದಾಟ ತೆರೆಯ ಮೇಲೆ ಪ್ರಕಟವಾಗಿತ್ತು. ಈಗ ಮಧು ಬಂಗಾರಪ್ಪ ಇನ್ನೊಂದು ಹೆಜ್ಜೆ ಮುಂದೆ ಹೋಗಿ ತಮ್ಮ ಸಮಾಜದ ಕಾರ್ಯಕ್ರಮಕ್ಕೆ ಸಿಎಂ ಅವರನ್ನು ಆಹ್ವಾನಿಸಿ ಹರಿಪ್ರಸಾದ್‌ಗೆ ಕೌಂಟರ್‌ ಕೊಟ್ಟಿದ್ದಾರೆ.

RELATED ARTICLES

Related Articles

TRENDING ARTICLES