Sunday, December 8, 2024

‘ಕೈವ’ಗೆ ಪ್ರೇಕ್ಷಕರ ಬಹುಪರಾಕ್ : ಮೈಸೂರು, ಮಂಡ್ಯ, ಮದ್ದೂರಿನಲ್ಲಿ ‘ವಿಜಯ’ಯಾತ್ರೆ

ಬೆಂಗಳೂರು : ಶುಕ್ರವಾರ ತೆರೆಗೆ ಬಂದ ಕೈವ ಸಿನಿಮಾ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಕ್ಲಾಸ್ ಕಥೆ, ಮಾಸ್ ನಿರೂಪಣೆ ಇರುವ ಕೈವ ಸಿನಿಮಾಗೆ ಎಲ್ಲಾ ವರ್ಗದ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ಚಿತ್ರಕ್ಕೆ ಸಿಕ್ತಿರೋ ರೆಸ್ಪಾನ್ಸ್ ನೋಡಿ ಸದ್ಯ ಕೈವ ಟೀಮ್ ವಿಜಯಯಾತ್ರೆಗೆ ಹೊರಟು ನಿಂತಿದೆ.

ಧನ್ವೀರ್ ನಟನೆಯ ಕೈವ ಸಿನಿಮಾ ವಿಮರ್ಷಕರು ಮತ್ತು ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದೆ. ಚಿತ್ರತಂಡ 1980ರ ದಶಕದಲ್ಲಿ ಬೆಂಗಳೂರಿನಲ್ಲಿ ನಡೆದ ಒಂದು ನೈಜ ಕಥೆಯನ್ನ ತೆರೆಗೆ ತಂದಿದೆ. ಒಂದು ಕಡೆ ಅಂದಿನ ಭೂಗತ ಲೋಕ. ಅದರ ನಡುವೆ ನಾಯಕ-ನಾಯಕಿಯ ಪ್ರೇಮಲೋಕ. ಈ ಪಾತಕಲೋಕ-ಪ್ರೇಮಲೋಕ ಮುಖಾಮುಖಿ ಆದಾಗ ಏನಾಗುತ್ತೆ ಎನ್ನುವುದೇ ಕೈವ ಕಥೆ.

ಒಂದು ಕಡೆ ಪಾತಕ ಲೋಕದ ಕ್ರೌರ್ಯ, ಇನ್ನೊಂದು ಕಡೆ ಅಮಾಯಕ ನಾಯಕ ನಾಯಕಿಯ ಮುಗ್ದ ಪ್ರೇಮ ಕಥೆಯನ್ನ ತೆರೆಗೆ ತಂದಿರುವ ಪರಿ ನಿಜಕ್ಕೂ ಅದ್ಭುತವಾಗಿದೆ. 1980ರ ದಶಕದ ಪರಿಸರವನ್ನ ಕಟ್ಟಿಕೊಟ್ಟಿರೋ ಪರಿ ಕೂಡ ಸಖತ್ ಆಗಿದೆ. ಜಯತೀರ್ಥ ಅವರ ಕ್ಲಾಸ್ ಸ್ಟೈಲ್, ಧನ್ವೀರ್ ಮಾಸ್ ಅಪೀಲ್ ಪ್ರೇಕ್ಷಕರಿಗೆ ಇಷ್ಟವಾಗ್ತಿದೆ. ಮಾಸ್ ಕ್ಲಾಸ್ ಎಲ್ಲ ವರ್ಗದ ಪ್ರೇಕ್ಷಕರು ಚಿತ್ರವನ್ನ ಸಮನಾಗಿ ಮೆಚ್ಚಿಕೊಳ್ತಾ ಇದ್ದಾರೆ. ಮಲ್ಟಿಪ್ಲೆಕ್ಸ್ ಆಡಿಯನ್ಸ್ ಕೂಡ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸ್ತಾ ಇದ್ದಾರೆ.

ಈ ಸುದ್ದಿ ಓದಿದ್ದೀರಾ? : ನಲ್ಮೆಯ ಸೆಲೆಬ್ರಿಟಿಗಳಿಗೆ ಶರಣು ಶರಣಾರ್ಥಿ : ನಟ ದರ್ಶನ್

ಇಂದಿನಿಂದ ವಿಜಯಯಾತ್ರೆ

ಚಿತ್ರಕ್ಕೆ ಸಿಕ್ಕಿರೋ ರೆಸ್ಪಾನ್ಸ್ ನೋಡಿ ಕೈವ ಟೀಮ್ ಅಂತೂ ಈಗಾಗಲೇ ವಿಜಯಯಾತ್ರೆ ಮಾಡ್ತಾ ಇದೆ. ಇಂದು (ಭಾನುವಾರ) ಮಂಡ್ಯ, ಮೈಸೂರು, ಮದ್ದೂರು ಮತ್ತು ಚಾಮರಾಜನಗರಗಳಲ್ಲಿ ಕೈವ ಚಿತ್ರತಂಡ ಚಿತ್ರಮಂದಿರಗಳಿಗೆ ಭೇಟಿ ಕೊಟ್ಟಿದೆ.

RELATED ARTICLES

Related Articles

TRENDING ARTICLES