Wednesday, January 22, 2025

ಟ್ರಕ್ಕಿಂಗ್ ಬಂದಿದ್ದ ಯುವಕ 4 ಸಾವಿರ ಅಡಿ ಆಳದ ಪ್ರಪಾತದಲ್ಲಿ ಶವವಾಗಿ ಪತ್ತೆ!

ಚಿಕ್ಕಮಗಳೂರು : ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಟ್ರಕ್ಕಿಂಗ್ ಬಂದಿದ್ದ ಯುವಕ 4 ಸಾವಿರ ಅಡಿ ಆಳದ ಪ್ರಪಾತದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಭರತ್‌ ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಟ್ರಕ್ಕಿಂಗ್ ಬಂದಿದ್ದ ಯುವಕ ಚಿಕ್ಕಮಗಳೂರಿನ ರಾಣಿಝರಿ ಪಾಯಿಂಟ್ ಬಳಿ ಬೈಕ್ ನಿಲ್ಲಿಸಿ ನಾಪತ್ತೆಯಾಗಿದ್ದನು. ಗುಡ್ಡದ ತುದಿಯಲ್ಲಿ ಯುವಕನ ಟೀ ಶರ್ಟ್, ಮೊಬೈಲ್, ಸ್ಲಿಪರ್ ಪತ್ತೆಯಾಗಿತ್ತು.

ವೀಕೆಂಡ್ ಹಿನ್ನೆಲೆ ಭರತ್ ಬೆಂಗಳೂರಿನಿಂದ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ ಗುಡ್ಡದಲ್ಲಿರೋ ರಾಣಿಝರಿ ಪಾಯಿಂಟ್​ಗೆ ಟ್ರಕ್ಕಿಂಗ್ ಎಂದು ಬಂದಿದ್ದು ನಾಪತ್ತೆಯಾಗಿದ್ದನು. ಯುವಕನಿಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಶೋಧ ನಡೆಸಿದ್ದರು.

ಬಿ.ಇ ಮುಗಿಸಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಭರತ್‌ ಬೆಂಗಳೂರಿನಿಂದ ಹಾರ್ನೆಟ್ ಬೈಕ್ ನಲ್ಲಿ ಚಿಕ್ಕಮಂಗಳೂರಿಗೆ ಬಂದಿದ್ದರು. ಇತ್ತೀಚೆಗೆ ಕಂಪನಿ ಭರತ್​ಗೆ 3 ತಿಂಗಳ ಸಂಬಳ ನೀಡಿ ಕೆಲಸದಿಂದ ತೆಗೆದು ಹಾಕಿತ್ತು ಎನ್ನಲಾಗಿದೆ. ಇದರಿಂದ ನೊಂದಿದ್ದ ಭರತ್‌ ತನ್ನ‌ ಬೈಕ್​ನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ ರಾಣಿಝರಿ ಪಾಯಿಂಟ್​ಗೆ ಬಂದಿದ್ದನು.

ಪುತ್ರನಿಗಾಗಿ ಚಿಕ್ಕಮಗಳೂರಿಗೆ ಬಂದಿದ್ದ ಪೋಷಕರು

ಮಗ ವಾಪಸ್ ಮನೆಗೆ ಬಾರದ ಕಾರಣ ಪೋಷಕರು, ಮಗನನ್ನು ಹುಡುಕಿಕೊಂಡು ಚಿಕ್ಕಮಗಳೂರಿಗೆ ಬಂದಿದ್ದರು. ಇತ್ತ ರಾಣಿಝರಿ ಪಾಯಿಂಟ್ ನಲ್ಲಿ ಭರತ್ ತನ್ನ ಬೈಕ್‌ ನಿಲ್ಲಿಸಿದ್ದು, ಗುಡ್ಡದ ತುದಿಯಲ್ಲಿ ಟೀ ಶರ್ಟ್, ಮೊಬೈಲ್, ಸ್ಲಿಪರ್ ಪತ್ತೆಯಾಗಿತ್ತು. ಅನುಮಾನಗೊಂಡಿರುವ ಬಾಳೂರು ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಭರತ್​ಗಾಗಿ ಹುಡುಕಾಟ ನಡೆಸಿದ್ದರು.

RELATED ARTICLES

Related Articles

TRENDING ARTICLES