ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ಕಲಾಸರಸ್ವತಿ ಲೀಲಾವತಿ ಅವರ ನಿಧನಕ್ಕೆ ಹಿರಿಯ ನಟ ಅನಂತ್‌ನಾಗ್ ಸಂತಾಪ ಸೂಚಿಸಿದ್ದಾರೆ.
ಲೀಲಾವತಿಯ ಅವರೊಂದಿಗೆ ಒಡನಾಟದ ದಿನಗಳನ್ನ ನೆನೆದ ಅನಂತ್‌ನಾಗ್ ನನ್ನ ಬದುಕಿನಲ್ಲಿ ಲೀಲಾವತಿ ಅವರನ್ನ ನನ್ನ ಎರಡನೇ ತಾಯಿಯ ರೂಪದಲ್ಲಿ ನೋಡಿದ್ದೀನಿ. ಅದೇ ರೀತಿಯ ಪ್ರೀತಿ ಮತ್ತು ಗೌರವವನ್ನು ಕೊಟ್ಟಿದ್ದೀನಿ. ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ನನ್ನ ತಾಯಿ ಪುತ್ತೂರಿನವರು, ಲೀಲಾವತಿ ಅವರು ಬೆಳ್ತಂಗಡಿ ಅವರು ಅವರನ್ನೇ ನೋಡಿದ್ರೆ ಅಮ್ಮಾ ಅನ್ನೋ ಪದ ಬಿಟ್ರೆ ಬೇರೇ ಏನೂ ನನ್ನ ಬಾಯಿಗೆ ಬರುತ್ತಿರಲಿಲ್ಲ. ವೃತ್ತಿ ಬದುಕಿನ ಮೇಲೆ ಅವರಿಗೆ ಅಗಾಧವಾಗ ಪ್ರೀತಿ, ನಿಷ್ಠೆ ಇತ್ತು. ಸುಮಾರು 50 ವರ್ಷಗಳಿಂದ ನಟಿಸಿದ ನೆನಪುಗಳಿವೆ ಎಂದಿದ್ದಾರೆ.
ಇದನ್ನೂ ಓದಿ: ಲೀಲಮ್ಮನ ಫೋಟೋ ಮುಂದೆ ಕಣ್ಣೀರಿಟ್ಟ ಪ್ರೀತಿಯ ಶ್ವಾನ
ಕೆಲದಿನಗಳಿಂದ ಅವರಿಗೆ ಅನಾರೋಗ್ಯ ಎಂದು ತಿಳಿದಾಗ, ನಾನು ಮತ್ತು ನನ್ನ ಪತ್ನಿ ಗಾಯಿತ್ರಿ ಅವರ ಮನೆಗೆ ಲೀಲಾವತಿ ಅಮ್ಮನವರೊಂದಿಗೆ 4-5 ಗಂಟೆಗಳ ಕಾಲ ಕಳೆದಿದ್ದೇನೆ ಎಂದರು.
ನಿನ್ನೆ ಅವರ ನಿಧನದ ಸುದ್ದಿ ಕೇಳಿದಾಗ ಬೇಜಾರಾಯ್ತು. ನನಗೆ ಮೊದಲು ಅವರು ಸಿಕ್ಕಿದ್ದೆ, ನನ್ನ ಸಿನಿಮಾದ ತಾಯಿಯ ಪಾತ್ರದಲ್ಲಿ ಆಮೇಲೆ ಸಹೋದರಿಯಾಗಿ ನಟಿಸಿದ್ದಾರೆ. ನನ್ನ ಜೊತೆ ಲೀಲಾವತಿ ಅವರು 35ರಿಂದ 40 ಸಿನಿಮಾಗಳನ್ನ ಮಾಡಿದ್ದಾರೆ ಎಂದು ಅನಂತ್ ನಾಗ್ ಸ್ಮರಿಸಿದ್ದಾರೆ.