Wednesday, January 22, 2025

ಸ್ವಲ್ಪ ಮಿಸ್ ಆಗಿದ್ರೂ ಈ ವ್ಯಕ್ತಿ ಹುಲಿಗೆ ಆಹಾರ

ಉತ್ತರಾಖಂಡ್​: ವ್ಯಕ್ತಿಯೊಬ್ಬ ರಸ್ತೆಯಲ್ಲಿ ಪ್ರಶಾಂತವಾಗಿ ನಡೆದುಕೊಂಡು ಹೋಗುತ್ತಿದ್ದ ವೇಳೆ, ಅದೇ ರಸ್ತೆಯಲ್ಲಿ ಹುಲಿಯೊಂದು ರಸ್ತೆ ದಾಟುವ ದೃಶ್ಯ ಸೆರೆಯಾಗಿದೆ. ಸ್ವಲ್ಪ ಮಿಸ್ ಆಗಿದ್ರೂ ಆ ವ್ಯಕ್ತಿ ಮಾತ್ರ ಹುಲಿಯ ಬಾಯಿಗೆ ಆಹಾರವಾಗುತ್ತಿದ್ದ.

ಇದನ್ನೂ ಓದಿ: ಸರ್ಕಾರಿ ಗೌರವಗಳೊಂದಿಗೆ ಲೀಲಾವತಿ ಅಂತ್ಯ ಸಂಸ್ಕಾರ!

ಈ ಘಟನೆ ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾವನದ ಬಳಿ ನಡೆದಿದೆ. ಈ ಪ್ರದೇಶದಲ್ಲಿ ಜನಸಾಮಾನ್ಯರ ಮೇಲೆ ಹುಲಿಗಳು ದಾಳಿ ಮಾಡಿರುವ ಸುದ್ದಿಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಇದೀಗ ಅಂತಹದ್ದೇ ಘಟನೆ ಇದೇ ಸ್ಥಳದಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಬೃಹದಾಕಾರದ ಹುಲಿಯೊಂದು ಆತನ ಪಕ್ಕದಲ್ಲಿಯೇ ರಸ್ತೆ ದಾಟಿದ್ದು, ಆ ವ್ಯಕ್ತಿ ಕೂದಲೆಳೆಯುವ ಅಂತರದಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾನೆ.

ಈ ಘಟನೆಯ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

RELATED ARTICLES

Related Articles

TRENDING ARTICLES