Thursday, January 23, 2025

ಮಿಜೋರಂ ನ ನೂತನ ಸಿಎಂ ಲಾಲ್ಡುಹೋಮ ಪ್ರಮಾಣ ವಚನ ಸ್ವೀಕಾರ!

ಮಿಜೋರಂ: ರಾಜಧಾನಿ ಐಜ್ವಾಲ್​ ನಲ್ಲಿ ನೂತನ ಮುಖ್ಯಮಂತ್ರಿಯಾಗಿ ಝೋರಂ ಪೀಪಲ್ಸ್ ಮೂವ್‌ಮೆಂಟ್‌ನ (ಝಡ್‌ಪಿಎಂ) ಪಕ್ಷದ ಅಧ್ಯಕ್ಷ ಲಾಲ್ಟುಹೋಮಾ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು.

ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಹರಿಬಾಬು ಕಂಭಂಪತಿ ಪ್ರತಿಜ್ಞಾವಿಧಿ ಬೋಧಿಸಿದರು.
ಈ ವೇಳೆ 11 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 40 ಸದಸ್ಯ ಬಲದ ಮಿಜೋರಾಂನಲ್ಲಿ ಝಡ್‌ಪಿಎಂ ಪಕ್ಷ 27 ಸ್ಥಾನಗಳನ್ನು ಗೆದ್ದುಕೊಳ್ಳುವ ಮೂಲಕ ಬಹುಮತ ಸಾಧಿಸಿದೆ.

ಇದನ್ನೂ ಓದಿ: ಶಿಕ್ಷಕನ ಹೀನ ಕೃತ್ಯಕ್ಕೆ ಬೆಚ್ಚಿಬಿದ್ದ ಗ್ರಾಮ: ಕಾಮುಕ ಶಿಕ್ಷಕ ಅರೆಸ್ಟ್​​!

ಇತ್ತೀಚೆಗೆ ನಡೆದ ರಾಜಸ್ಥಾನ, ಮಧ್ಯಪ್ರದೇಶ,ಛತ್ತಿಸ್​ಗಡ್​, ತೆಲಂಗಾಣ, ಮಿಜೋರಾಂ ವಿಧಾನಸಭಾ ಚುನಾವಣೆಗಳ ಪೈಕಿ ತೆಲಂಗಾಣ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್​ ಅಧಿಕಾರಕ್ಕೆರಿದರೇ ರಾಜಸ್ಥಾನ, ಮಧ್ಯಪ್ರದೇಶ, ಛತ್ತಿಸ್​ಗಡ್​ನಲ್ಲಿ ಬಿಜೆಪಿ ವಿಜಯಪಥಾಕೆ ಹಾರಿಸಿದೆ. ಇನ್ನು, ಮಿಜೋರಾಂನಲ್ಲಿ ನೂತನ ಸ್ಥಳೀಯ ಪಕ್ಷ ಝೋರಂ ಪೀಪಲ್ಸ್​ ಮೂವ್​ಮೆಂಟ್​ ಅಧಿಕಾರಕ್ಕೇರದ ಚುಕ್ಕಾಣಿ ಹಿಡಿದಿದೆ.

RELATED ARTICLES

Related Articles

TRENDING ARTICLES