Friday, November 22, 2024

ಐತಿಹಾಸಿಕ ಕಡಲೆಕಾಯಿ ಪರಿಷೆ ನಾಳೆ ಶುರು: ಪರ್ಯಾಯ ಮಾರ್ಗ ವ್ಯವಸ್ಥೆ ಹೀಗಿದೆ ನೋಡಿ

ಬೆಂಗಳೂರು: ಐತಿಹಾಸಿಕ ಕಡಲೆಕಾಯಿ ಪರಿಷೆ ನಾಳೆಯಿಂದ ಡಿ.13ರವರೆಗೆ

ಯ ದೊಡ್ಡ ಬಸವಣ್ಣ, ದೊಡ್ಡ ಗಣಪತಿ ದೇವಸ್ಥಾನದಲ್ಲಿ ನಡೆಯಲಿದೆ.

ಕಡಲೆಕಾಯಿ ಪರಿಷೆಗೆ ಸಿಲಿಕಾನ್​ ಸಿಟಿ ಜನರು ಸೇರಿದಂತೆ ಸುತ್ತಮುತ್ತಲ ಲಕ್ಷಾಂತರ ಜನರು ಆಗಮಿಸುತ್ತಾರೆ. ಹಾಗಾಗಿ ಬೆಂಗಳೂರಿನ ಬಸವನಗುಡಿ ವ್ಯಾಪ್ತಿಯಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಮತ್ತು ಪಾರ್ಕಿಂಗ್​​​ಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಪರ್ಯಾಯ ಮಾರ್ಗಗಳು ಹೀಗಿವೆ

ಲಾಲ್​ಬಾಗ್​​ ವೆಸ್ಟ್​ಗೇಟ್​ ಕಡೆಯಿಂದ ವಾಣಿವಿಲಾಸ ರಸ್ತೆ ಮೂಲಕ 5ನೇ ಮುಖ್ಯರಸ್ತೆ ಚಾಮರಾಜಪೇಟೆ, ಗಾಂಧಿಬಜಾರ್ ಮುಖ್ಯರಸ್ತೆಯಿಂದ ಬುಲ್​​ಟೆಂಪಲ್ ರಸ್ತೆಯ ರಾಮಕೃಷ್ಣಾಶ್ರಮ ವೃತ್ತದಲ್ಲಿ ಬಲತಿರುವು ಪಡೆಯಬೇಕು. ಹಯವದನರಾವ್ ರಸ್ತೆ ಮೂಲಕ ಗವಿಪುರಂ 3ನೇ ಅಡ್ಡರಸ್ತೆ ಮೂಲಕ ಮೌಂಟ್​​ಜಾಯ್​ ಮೂಲಕ ಹನುಮಂತನಗರದ ಕಡೆ ತೆರಳಬಹುದಾಗಿದೆ.

ಆರ್​​.ವಿ.ಟೀಚರ್ಸ್​ ಕಾಲೇಜ್​ ಜಂಕ್ಷನ್​ ಕಡೆಯಿಂದ ಟ್ರಿನಿಟಿ ಆಸ್ಪತ್ರೆ ರಸ್ತೆ, ಕೆ.ಆರ್​​.ರಸ್ತೆಯಲ್ಲಿ ಬ್ಯೂಗಲ್​ ರಾಕ್​ ರಸ್ತೆ ಮೂಲಕ ಹನುಮಂತನಗರ ಕಡೆಗೆ ಸಂಚರಿಸುವ ವಾಹನಗಳು ಟ್ಯಾಗೋರ್ ಸರ್ಕಲ್​ನಲ್ಲಿ ಬಲತಿರುವು ಪಡೆಯಬೇಕು.

ಗಾಂಧಿಬಜಾರ್ ಮುಖ್ಯರಸ್ತೆ ಮೂಲಕ ರಾಮಕೃಷ್ಣಾಶ್ರಮ ಜಂಕ್ಷನ್​​ ಮೂಲಕ ಹಯವದನರಾವ್​ ರಸ್ತೆಯಲ್ಲಿ ಗವಿಪುರಂ ಎಕ್ಸ್​ಟೆಂಕ್ಷನ್​ 3ನೇ ಅಡ್ಡರಸ್ತೆ ಮೂಲಕ ಮೌಂಟ್​​ಜಾಯ್ ರಸ್ತೆ​ ಮೂಲಕ ಹನುಮಂತನಗರ ಕಡೆಗೆ ತೆರಳಬೇಕು.

ತ್ಯಾಗರಾಜನಗರ/ಬನಶಂಕರಿ ಕಡೆಯಿಂದ 5ನೇ ಮುಖ್ಯರಸ್ತೆ, ಎನ್​​.ಆರ್​​.ಕಾಲೋನಿ ರಸ್ತೆಯಲ್ಲಿ ಬುಲ್​ಟೆಂಪಲ್ ರಸ್ತೆ ಮೂಲಕ ಚಾಮರಾಜಪೇಟೆ ಕಡೆಗೆ ಸಂಚರಿಸುವ ವಾಹನಗಳು ಬುಲ್​ಟೆಂಪಲ್ ರಸ್ತೆಯ ಕಾಮತ್ ಯಾತ್ರಿ ನಿವಾಸ ಜಂಕ್ಷನ್​ನಲ್ಲಿ ಎಡ ತಿರುವು ಪಡೆದು ಅಶೋಕ್​​ನಗರ 2ನೇ ಕ್ರಾಸ್​ ರಸ್ತೆ ಮೂಲಕ ಕತ್ರಿಗುಪ್ಪೆ ರಸ್ತೆ ಜಂಕ್ಷನ್​ನಲ್ಲಿ ಬಲತಿರುವು ಪಡೆದು 3ನೇ ಮುಖ್ಯರಸ್ತೆ ನಾರಾಯಣಸ್ವಾಮಿ ಸರ್ಕಲ್​ನಲ್ಲಿ ಕೆ.ಜಿ.ನಗರ ಮುಖ್ಯರಸ್ತೆ ಅಥವಾ ಹಯವದನರಾವ್​ ರಸ್ತೆ ಮೂಲಕ ರಾಮಕೃಷ್ಣಾಶ್ರಮ ಜಂಕ್ಷನ್​ನಿಂದ ಚಾಮರಾಜಪೇಟೆ ಕಡೆಗೆ ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.

ವಾಹನಗಳ ಪಾರ್ಕಿಂಗ್​​ ವ್ಯವಸ್ಥೆ

ಬೆಂಗಳೂರಿನ ಬಸವನಗುಡಿ ವ್ಯಾಪ್ತಿಯಲ್ಲಿ ವಾಹನ ಪಾರ್ಕಿಂಗ್​​ಗೆ ವ್ಯವಸ್ಥೆ ಮಾಡಲಾಗಿದೆ. ಎನ್​.ಆರ್​​.ಕಾಲೋನಿಯ ಎಪಿಎಸ್​ ಕಾಲೇಜು ಮೈದಾನ, ಹಯವದನರಾವ್​ ರಸ್ತೆಯ ಕೊಹಿನೂರು ಆಟದ ಮೈದಾನ ಹಾಗೂ ಬುಲ್​ಟೆಂಪಲ್ ರಸ್ತೆಯ ಉದಯಭಾನು ಮೈದಾನದಲ್ಲಿ ಪಾಕಿಂಗ್​​ಗೆ ಅವಕಾಶ ನೀಡಲಾಗಿದೆ.

 

 

RELATED ARTICLES

Related Articles

TRENDING ARTICLES