Wednesday, January 22, 2025

ಮಾಜಿ MLA ಮೊಮ್ಮಗನಿಗೆ ಸರಗಳ್ಳತನ ಮಾಡೋ ಶೋಕಿ : ಮೂವರ ಬಂಧನ

ಬೆಂಗಳೂರು: ಸರಗಳ್ಳತನ ಮಾಡುತ್ತಿದ್ದ ಮಾಜಿ ಶಾಸಕರ ಮೊಮ್ಮಗ ಸೇರಿ ಮೂವರನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. 

ಮಾಜಿ ಎಂಎಲ್ಎ(MLA) ಮೊಮ್ಮಗನಾದ ಅಭಿ ಸೇರಿದಂತೆ ರಾಕೇಶ್, ಸಲ್ಮಾನ್ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ಧಾರೆ.

ಇದನ್ನೂ ಓದಿ: ಮೆಟ್ರೋದಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕ ಅಂದರ್!

ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಸರಗಳ್ಳತನ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಜೊತೆಗೆ ಸರಗಳ್ಳತನಕ್ಕೆಂದು ಈ ಖತರ್ನಾಕ್​ ಆಸಾಮಿಗಳು ಬೈಕ್​ಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿ ಕೃತ್ಯ ಎಸಗುತ್ತಿದ್ದರು ಎಂಬುದು ತಿಳಿದು ಬಂದಿದೆ.

ಸರಗಳ್ಳತನದ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಳೆದ ಕೆಲ ಸಮಯದಿಂದ ನಗರದ ವಿವಿಧೆಡೆ ಕಣ್ಣಿಟ್ಟದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳತನ ನಡೆದ ಭಾಗಗಳಲ್ಲಿ ಇರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದ್ದರು. ಈ ವೇಳೆ ಆರೋಪಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು. ಅದರನ್ವಯ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು.

RELATED ARTICLES

Related Articles

TRENDING ARTICLES