ಬೆಂಗಳೂರು: ರಾಜ್ಯದ ಜನತೆಗೆ ಮತ್ತೊಂದು ದರ ಏರಿಕೆಯ ಬಿಸಿ ತಟ್ಟಲಿದೆ. ನಂದಿನಿ ಹಾಲಿನ ದರ ಪರಿಷ್ಕರಣೆಗೆ KMF ಸಿದ್ದತೆ ಮಾಡಿಕೊಂಡಿದೆ. ಕೆಎಂಎಫ್ ಅಧಿಕಾರಿಗಳು ನಂದಿನಿ ಹಾಲಿನ ದರ ಏರಿಕೆ ಕುರಿತು ಚಿಂತನೆ ಮಾಡಿದ್ದಾರೆ.
ಹಾಗಾದರೆ, ಹೊಸ ವರ್ಷದ ಆರಂಭದಲ್ಲೇ ನಂದಿನಿ ಹಾಲಿನ ದರ ಏರಿಕೆ ಆಗುತ್ತಾ ಎಂದು ಜನರು ಆತಂಕದಲ್ಲಿದ್ದಾರೆ. ಹಾಲಿನ ದರ ಪರಿಷ್ಕರಣೆಗೆ 14 ಹಾಲು ಒಕ್ಕೂಟಗಳು KMF ಗೆ ಮನವಿ ಮಾಡಿದ್ದವು. ಹೀಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕೆಎಂಎಫ್ ನಿರ್ಧರಿಸಿದೆ.
ಇದನ್ನೂ ಓದಿ: ಇಂದು ತೆಲಂಗಾಣ ನೂತನ ಸಿಎಂ ಪದಗ್ರಹಣ: ಸಿಎಂ ಸಿದ್ದರಾಮಯ್ಯ ಸೇರಿ ಅನೇಕ ಗಣ್ಯರು ಭಾಗಿ!
ಬೆಳಗಾವಿ ಅಧಿವೇಶನ ಮುಗಿದ ಬಳಿಕ ಅಥವಾ ಜನವರಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಕೆಎಂಎಫ್ ಅಧಿಕಾರಿಗಳು ಭೇಟಿ ಮಾಡಲಿದ್ದಾರೆ. ಆರ್ಥಿಕ ನಷ್ಟದ ಹಿನ್ನಲೆ 5 ರೂ. ಪ್ರತಿ ಲೀಟರ್ಗೆ ದರ ಹೆಚ್ಚಿಸುವಂತೆ ಕೆಎಂಎಫ್ ನವರು ಮನವಿ ಮಾಡಲಿದ್ದಾರೆ. ಕಳೆದ ಆಗಸ್ಟ್ 1ರಿಂದ ಕೆಎಂಎಫ್ ನಂದಿನಿ ಹಾಲಿನ ಪ್ರತೀ ಲೀಟರ್ಗೆ 3ರೂ. ಗಳಂತೆ ಹೆಚ್ಚಳ ಮಾಡಿತ್ತು. 5ರೂ ಹೆಚ್ಚಳ ಮಾಡಲು KMF ಮನವಿ ಮಾಡಿತ್ತು. ಆದ್ರೆ ಸರ್ಕಾರ ಕೇವಲ ಮೂರು ರೂಪಾಯಿ ಹೆಚ್ಚಳ ಮಾಡಿತ್ತು. ಹೀಗಾಗಿ ಕಳೆದ ಬಾರಿ 3 ರೂಪಾಯಿಗಳನ್ನು KMF ರೈತರಿಗೆ ನೀಡಿತ್ತು. ಕೆಎಂಎಫ್ ನಷ್ಟ ಸರಿದೂಗಿಸಲು ದರ ಪರಿಷ್ಕರಣೆ ಅನಿವಾರ್ಯ ಎನ್ನುತ್ತಿದೆ.