Wednesday, January 22, 2025

ಜೈನ ಮುನಿ ಹತ್ಯೆ: ಆರೋಪಿಗಳ ವಿರುದ್ದ ಚಾರ್ಜ್ ಶೀಟ್​​ ಸಲ್ಲಿಸಿದ ಸಿಐಡಿ!

ಬೆಂಗಳೂರು: ಜೈನ ಮುನಿ ಹತ್ಯೆ ಕೇಸ್​ ಸಂಬಂಧ ಸಿಐಡಿ ಚಾರ್ಜ್​ ಶೀಟ್ ಸಲ್ಲಿಸಿದೆ. ಜುಲೈ 5 ರಂದು ರಾತ್ರಿ ಜೈನಮುನಿ ನಂದಿ ಕಾಮಕುಮಾರ ಸ್ವಾಮೀಜಿ ಹತ್ಯೆಯಾಗಿತ್ತು. ಕರೆಂಟ್ ಶಾಕ್ ಕೊಟ್ಟು ಕೊಂದು ಬಳಿಕ ಜೈನ ಮುನಿ ದೇಹ ತುಂಡರಿಸಿ ಬೋರ್ ವೆಲ್​ಗೆ ಎಸೆದಿದ್ದರು ಆರೋಪಿಗಳಾದ ನಾರಾಯಣ ಮಾಳಿ ಮತ್ತು ಹುಸೇನ್‌ ಡಲಾಯತ್ ಇವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.

ನ್ಯಾಯಾಲಯಕ್ಕೆ ಬರೋಬ್ಬರಿ 500 ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಹಣವಷ್ಟೇ ಅಲ್ಲದೇ ಜೈನಮುನಿಯ ಬೈಗುಳವೇ ಕೊಲೆಗೆ ಕಾರಣವಾಯ್ತ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ. ಸಾಕ್ಷಿಗಳ 164 ಹೇಳಿಕೆಗಳ ಜೊತೆಗೆ ಟೆಕ್ನಿಕಲ್​ ಎವಿಡೆನ್ಸ್​ ಸಂಗ್ರಹಿಸುತ್ತಿದ್ದಾರೆ.  ಜೈನ‌ಮುನಿ ಜೊತೆ ಆರೋಪಿ ನಾರಾಯಣ ಮಾಳಿ ಹೆಚ್ಚು ಒಡನಾಟ ಹೊಂದಿದ್ದ ಎಂದು ಸಾಕ್ಷಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರವಾಸಿಗರಿಗೆ ಸಿಹಿಸುದ್ದಿ: ಡಿ.11 ರಿಂದ ನಂದಿಬೆಟ್ಟಕ್ಕೆ ಎಲೆಕ್ಟ್ರಿಕ್ ರೈಲು!

ಆರು ಲಕ್ಷ ಹಣದ ಜೊತೆ ಜೈನ ಮುನಿಗಳು ಆರೋಪಿಯನ್ನ ಹೀಯಾಳಿಸಿ ನಿಂದನೆ ಮಾಡಿ ಬೈದಿದ್ದರು ಎಂದು ಸಹ ತಿಳಿದು ಬಂದಿದೆ. ಇದ್ರಿಂದಲೇ ಕೋಪಗೊಂಡಿದ್ದ ಆರೋಪಿ ನಾರಾಯಣ ಮಾಳಿ ಕೊಲೆ ಮಾಡಲು ಸಂಚು ರೂಪಿಸಿದ್ದನಂತೆ.

RELATED ARTICLES

Related Articles

TRENDING ARTICLES