ಬೆಂಗಳೂರು: ಚಳಿಗಾಲ ಶುರುವಾಗುತ್ತಿದ್ದಂತೆ ಮದ್ಯಪ್ರಿಯರು ಬಿಯರ್ ಮೊರೆ ಹೋಗಿದ್ದಾರೆ ಇದರಿಂದಾಗಿ ರಾಜ್ಯದಲ್ಲಿ ಬಿಯರ್ ಬೇಡಿಕೆ ಹೆಚ್ಚಳವಾಗಿದೆ.
ಬಿಯರ್ ಮಾರಾಟದಿಂದ ಅಬಕಾರಿ ಇಲಾಖೆಗೆ ಹೆಚ್ಚಿನ ಆದಾಯ ಬರುತ್ತಿದೆ. ಕಳೆದ ಎಂಟು ತಿಂಗಳಿನಿಂದ ಶೇ.15.58 ರಷ್ಟು ಹೆಚ್ಚುವರಿ ಬಿಯರ್ ಮಾರಾಟ ಮಾಡಲಾಗಿದೆ. ನವೆಂಬರ್ ತಿಂಗಳಲ್ಲೇ ಶೇ.17ರಷ್ಟು ಬಿಯರ್ ಮಾರಾಟ ಹೆಚ್ಚಳವಾಗಿದೆ. ಮದ್ಯಪ್ರಿಯರು ಪ್ರತಿ ತಿಂಗಳು ಸರ್ಕಾರದ ಖಜಾನೆ ತುಂಬಿಸುತ್ತಿದ್ದಾರೆ.
ಇದನ್ನೂ ಓದಿ: ರಾಜ್ಯದ ಜನತೆಗೆ ಶಾಕಿಂಗ್ ಸುದ್ದಿ : ಮತ್ತೆ ತಟ್ಟಲಿದೆ ಹಾಲಿನ ದರ ಏರಿಕೆ ಬಿಸಿ!
ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ 29.95 ಲಕ್ಷ ಬಾಕ್ಸ್ ಗಳಷ್ಟು ಮಾರಾಟವಾಗಿತ್ತು. ಈ ವರ್ಷ ನವೆಂಬರ್ನಲ್ಲಿ 35.05 ಲಕ್ಷ ಬಿಯರ್ ಬಾಕ್ಸ್ ಮಾರಾಟ ಮಾಡಲಾಗಿದೆ. ದರ ಏರಿಕೆಯ ನಡುವೆಯೂ ಮದ್ಯ ಮಾರಾಟ ಬಲು ಜೋರಾಗಿದೆ. ಬಿಯರ್ ಜೊತೆಗೆ ಇತರೆ ಲಿಕ್ಕರ್ ಮಾರಾಟವೂ ಹೆಚ್ಚಳವಾಗಿದೆ. ನವೆಂಬರ್ ನಲ್ಲಿ ಶೇ. 0.43 ಲಿಕ್ಕರ್ ಮಾರಾಟವಾಗಿತ್ತು.
ಇನ್ನು, ಅಬಕಾರಿ ಇಲಾಖೆ 2023-24ರಲ್ಲಿ 36 ಸಾವಿರ ಕೋಟಿ ಆದಾದ ನಿರೀಕ್ಷೆ ಮಾಡಿತ್ತು. ಆದರೆ ಕಳೆದ ಎಂಟು ತಿಂಗಳಲ್ಲೇ 22,500 ಕೋಟಿ ಆದಾಯ ಸಂಗ್ರಹವಾಗಿದೆ.