Sunday, January 5, 2025

ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ‌ ಕಂದಾಯ ನಿರೀಕ್ಷಕರ ಮೇಲೆ ಹಲ್ಲೆ!

ಮೈಸೂರು: ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ‌ ವ್ಯಕ್ತಿಯೋರ್ವ ಸರ್ಕಾರಿ ಕಚೇರಿಗೆ ನುಗ್ಗಿ ಕಂದಾಯ ನಿರೀಕ್ಷಕನ ಮೇಲೆ‌ ಹಲ್ಲೆ ನಡೆಸಿರುವ ಘಟನೆ ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿಯಲ್ಲಿ ನಡೆದಿದೆ.

ನಂದಕುಮಾರ್​​ ಹಲ್ಲೆಗೊಳಗಾದ ಕಂದಾಯ ನಿರೀಕ್ಷಕ. ಕುಂಬಾರಕೊಪ್ಪಲಿನ ಧನುಷ್ ಎಂಬಾತನಿಂದ ಹಲ್ಲೆ ನಡೆದಿದೆ. ಧನುಷ್​​​​ ಮಹಾನಗರ ಪಾಲಿಕೆ ವಲಯ ಕಚೇರಿ 5ರ ಬಾಗಿಲು ಮುಂಭಾಗ ಸಿಗರೇಟ್​​ ಸೇದುತ್ತಿದ್ದ. ಈ ವೇಳೆ ಹೊರಗೆ ಹೋಗಿ ಸಿಗರೇಟ್ ಸೇದಿ ಎಂದು RI ನಂದಕುಮಾರ್ ತಿಳಿಸಿದ್ದಾರೆ. ಇದಕ್ಕೆ ಸಿಟ್ಟಾದ ಧನುಷ್​ ಆಯುಕ್ತರ ಚೇಂಬರ್​ನಲ್ಲಿ RI ಇದ್ದ ವೇಳೆ ಒಳ ಪ್ರವೇಶ ಮಾಡಿ ನೀನು ಯಾವ ಸೀಮೆ RI ಎಂದು ಅವಾಚ್ಯ ಶಬ್ಧಗಳಿಂದ ನಿಂಧಿಸಿ ಹಲ್ಲೆ ನಡೆಸಿದ್ದಾನೆ. ಸ್ಥಳದಲ್ಲಿದ್ದವರು ಬಿಡಿಸಲು ಬಂದರೂ ಬಿಡದೆ ಹಲ್ಲೆ ಮಾಡಿದ್ದಾನೆ.

ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚಾಯ್ತು ಬಿಯರ್​​​ ಬೇಡಿಕೆ: ಕಾರಣವೇನು ಗೊತ್ತಾ?

ಆರೋಪಿ ಧನುಷ್ ವಿರುದ್ಧ ಕರ್ತವ್ಯಕ್ಕೆ ಅಡ್ಡಿ, ನಿಂದನೆ ಸೇರಿ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ವಿಜಯನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

RELATED ARTICLES

Related Articles

TRENDING ARTICLES