Sunday, January 19, 2025

ನಲ್ಮೆಯ ಸೆಲೆಬ್ರಿಟಿಗಳಿಗೆ ಶರಣು ಶರಣಾರ್ಥಿ : ನಟ ದರ್ಶನ್

ಬೆಂಗಳೂರು : ‘ಕಾಟೇರ’.. ಈ ವರ್ಷಾಂತ್ಯಕ್ಕೆ ಬೆಳ್ಳಿತೆರೆ ಮೇಲೆ ದರ್ಶನ ನೀಡೋಕೆ ಬರುತ್ತಿರುವ ನಟ ದರ್ಶನ್ ತುಗೂದೀಪ ಅವರ ಬಹುನಿರೀಕ್ಷಿತ ಚಿತ್ರ.. ಇದೇ ಡಿಸೆಂಬರ್ 29ಕ್ಕೆ ಕಾಟೇರ ರಿಲೀಸ್ ಆಗುತ್ತಿದ್ದು, ನಟ ದರ್ಶನ ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಈ ವರ್ಷಾಂತ್ಯಕ್ಕೆ ನಿಮ್ಮ ಮನದಂಗಳವನ್ನು ತುಂಬಲು ನಿಮ್ಮ ‘ಕಾಟೇರ’ ಚಿತ್ರ ಆಗಮಿಸಲಿದೆ. ಸದಾ ಪ್ರೀತಿ-ಪ್ರೋತ್ಸಾಹದೊಂದಿಗೆ ಹರಸಿ ಬೆಳೆಸುತ್ತಿರುವ ಕನ್ನಡ ಕಲಾಭಿಮಾನಿಗಳು ಹಾಗೂ ನಲ್ಮೆಯ ಸೆಲೆಬ್ರಿಟಿಗಳಿಗೆ ಶರಣು ಶರಣಾರ್ಥಿ’ ಎಂದು ಬರೆದುಕೊಂಡಿದ್ದಾರೆ.

ಈಗಾಗಲೇ ಕಾಟೇರ ಚಿತ್ರತಂಡ ಪ್ರಚಾರ ಕೆಲಸ ಶುರು ಮಾಡಿದೆ. ಚಿತ್ರದ ಮೊದಲ ಹಾಡನ್ನು ರಿಲೀಸ್ ಮಾಡಿದೆ. ಪಸಂದಾಗವ್ನೆ ಎಂಬ ಈ ಹಾಡು ಡಿ ಬಾಸ್ ಫ್ಯಾನ್ಸ್​ಗಳ ಮನ ಗೆದ್ದಿದೆ. ಯೂಟ್ಯೂಬ್​ನಲ್ಲಿ 10 ಮಿಲಿಯನ್​ಗೂ ಅಧಿಕ ವೀಕ್ಷಣೆ ಕಂಡು ದಾಖಲೆ ನಿರ್ಮಿಸಿದೆ.

ದಚ್ಚು-ತರುಣ್ ಕಾಂಬೋನ ಕಾಟೇರ

ದರ್ಶನ್ ರಾಬರ್ಟ್​ ಬಳಿಕ ಅದೇ ನಿರ್ದೇಶಕರ ಜೊತೆ ಮಾಡಿರುವ ಸಿನಿಮಾ ಆಗಿರುವುದರಿಂದ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಮೂಡಿದೆ. ತರುಣ್ ಸುಧೀರ್ ನಿರ್ದೇಶನ ಹಾಗೂ ರಾಕ್​ಲೈನ್ ಪ್ರೊಡಕ್ಷನ್ಸ್ ನಲ್ಲಿ ಕಾಟೇರ ಮೂಡಿಬಂದಿದ್ದಾನೆ. ದರ್ಶನ್​ಗೆ ನಾಯಕಿಯಾಗಿ ಕನಸಿನ ರಾಣಿ ಮಾಲಾಶ್ರೀ ಪುತ್ರಿ ಆರಾಧನಾ ಬಣ್ಣ ಹಚ್ಚಿದ್ದಾರೆ.

ಬಾಕ್ಸ್​ ಆಫೀಸ್ ಲೂಟಿಗೆ ದಾಸ ರೆಡಿ

ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ನಟ ದರ್ಶನ್ ಈ ಸಿನಿಮಾದಿಂದ ಮತ್ತೊಮ್ಮೆ ತನ್ನ ನಂಬಿದವರ ಕಾಯೋ ಒಡೆಯನಾಗಿ ಮಿಂಚು ಹರಿಸಲಿದ್ದಾರೆ. ಇನ್ನು ಬಾಕ್ಸ್ ಆಫೀಸ್​​ನಲ್ಲಿ ಈ ಬಾಕ್ಸ್ ಆಫೀಸ್ ಸುಲ್ತಾನ ಎಷ್ಟು ಕೋಟಿ ಲೂಟಿ ಮಾಡ್ತಾನೆ ಎಂದು ಕಾದುನೋಡಬೇಕಿದೆ.

RELATED ARTICLES

Related Articles

TRENDING ARTICLES