Friday, November 22, 2024

ಚೆಂಡನ್ನು ಕೈಯಿಂದ ತಡೆದು ಔಟಾದ ಬಾಂಗ್ಲಾ ಬ್ಯಾಟರ್ ಮುಶ್ಫಿಕರ್ ರಹೀಮ್

ಬೆಂಗಳೂರು : ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯದಲ್ಲಿ ಬಾಂಗ್ಲಾದೇಶ ಬ್ಯಾಟರ್ ಮುಶ್ಫಿಕರ್ ವಿಭಿನ್ನವಾಗಿ ಔಟ್​ ಆಗಿದ್ದಾರೆ.

ಮಿರ್‌ಪುರ್​ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬಾಂಗ್ಲಾ ವಿಕೆಟ್ ಕೀಪರ್ ಬ್ಯಾಟರ್ ಮುಶ್ಫಿಕರ್ ತಾನು ಮಾಡಿದ ತಪ್ಪಿಗೆ ಸಪ್ಪೆ ಮೋರೆ ಹಾಕಿಕೊಂಡು ಪೆವಿಲಿಯನ್​ ಕಡೆ ಹೆಜ್ಜೆ ಹಾಕಿದ್ದಾರೆ.

ಕಿವೀಸ್ ಬೌಲರ್ ಜೇಮಿಸನ್ ಎಸೆದ 41ನೇ ಓವರ್​ನ 4ನೇ ಎಸೆತವನ್ನು ಮುಶ್ಫಿಕರ್ ಡ್ರೈವ್ ಮಾಡಿದರು. ಬಾಲ್ ಸ್ಟಂಪ್ ಹತ್ತಿರವೂ ಇರಲಿಲ್ಲ. ಆದರೆ, ಚೆಂಡು ಸ್ವಿಂಗ್ ಆಗಿ ಸ್ಟಂಪ್​ಗೆ ಬೀಳಬಹುದು ಎಂಬ ಆತಂಕದಲ್ಲಿ ಮುಶ್ಫಿಕರ್ ಕೈಯಿಂದ ತಡೆದರು.

ಕೂಡಲೇ ನ್ಯೂಜಿಲೆಂಡ್ ಆಟಗಾರರು ಫೀಲ್ಡ್​ ಅಂಪೈರ್​ಗೆ ಮನವಿ ಸಲ್ಲಿಸಿದರು. ಈ ಮನವಿಯನ್ನು ಪುರಸ್ಕರಿಸಿದ ತೀರ್ಪುಗಾರರು ಚರ್ಚಿಸಿ ಮರು ಪರಿಶೀಲನೆಗೆ ಮೂರನೇ ಅಂಪೈರ್​ಗೆ ಮನವಿ ಸಲ್ಲಿಸಿದರು. ರೀಪ್ಲೆ ಪರಿಶೀಲಿಸಿದ ಮೂರನೇ ಅಂಪೈರ್​ ಔಟ್ ಎಂದು ತೀರ್ಪು ನೀಡಿದ್ದಾರೆ. ಈ ಮೂಲಕ ಮುಶ್ಫಿಕುರ್ ರಹೀಮ್​​ ಟೆಸ್ಟ್ ಕ್ರಿಕೆಟ್‌ನಲ್ಲಿ ಫೀಲ್ಡಿಂಗ್​ಗೆ ಅಡ್ಡಿಪಡಿಸಿ ಔಟಾದ ಮೊದಲ ಬಾಂಗ್ಲಾದೇಶ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಐಸಿಸಿ ನಿಯಮದ ಪ್ರಕಾರ, ವಿಕೆಟ್​ಗೆ (ಸ್ಟಂಪ್​ಗೆ) ಬೀಳುವ ಬಾಲ್​ ಅನ್ನು ಬ್ಯಾಟರ್ ಕೈಯಿಂದ ರಕ್ಷಣೆ (ತಡೆಯುವಂತಿಲ್ಲ) ಮಾಡುವಂತಿಲ್ಲ. ಬ್ಯಾಟ್​ನಿಂದ ರಕ್ಷಣೆ ಮಾಡಬಹುದು.

RELATED ARTICLES

Related Articles

TRENDING ARTICLES