Wednesday, January 22, 2025

ಸೋಮಣ್ಣ ಮುಂದಿನ ನಡೆ ಇಂದು ಘೋಷಣೆ ಸಾಧ್ಯತೆ?

ಬೆಂಗಳೂರು: ವಿಧಾನಸಭೆ ಚುನಾವಣೆ ಬಳಿಕ ಪಕ್ಷದ ಮೇಲೆ ಮುನಿಸಿಕೊಂಡಿರುವ ಮಾಜಿ ಸಚಿವ ವಿ.ಸೋಮಣ್ಣ ಡಿಸೆಂಬರ್ 6 ನಂತರ ತಮ್ಮ ನಡೆ ಘೋಷಿಸುವುದಾಗಿ ಹೇಳಿದ್ದರು.

ಇಂದು ಸಿದ್ಧಗಂಗಾ ಮಠದಲ್ಲಿ ತಾವು ನಿರ್ಮಿಸಿರುವ ಗುರುಭವನವನ್ನು ಉದ್ಘಾಟನೆ ಮಾಡಲಿದ್ದಾರೆ. ಸಿದ್ಧಗಂಗಾ ಮಠದಲ್ಲಿ ನಡೆಯಲಿರುವ ಈ ಉದ್ಘಾಟನಾ ಕಾರ್ಯಕ್ರಮದಲ್ಲೇ ಸೋಮಣ್ಣ ತಮ್ಮ ಮುಂದಿನ ರಾಜಕೀಯ ನಡೆ ಘೋಷಣೆ ಮಾಡಲಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.

ಇದನ್ನೂ ಓದಿ: ಇಂದು ಅಧಿವೇಶನಕ್ಕೆ ಸಾಲು ಸಾಲು ಪ್ರತಿಭಟನೆಗಳ ಬಿಸಿ!

ತುಮಕೂರಿನ ಸಿದ್ಧಗಂಗಾ ಮಠದ ಹಳೇ ಮಠದ ಆವರಣದಲ್ಲಿ ಸೋಮಣ್ಣ ತಮ್ಮ ಸ್ವಂತ ಖರ್ಚಿನಲ್ಲೇ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಗುರುಭವನ ನಿರ್ಮಿಸಿದ್ದಾರೆ. ಇಂದು ಅವರೇ ಲೋಕಾರ್ಪಣೆ ಮಾಡಲಿದ್ದಾರೆ. ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಲಿಂಗೈಕ್ಯ ಶಿವಕುಮಾರಸ್ವಾಮೀಜಿ ಗದ್ದುಗೆ ಪಕ್ಕದಲ್ಲಿ ವೇದಿಕೆ ನಿರ್ಮಾಣ ಮಾಡಲಾಗಿದೆ.

RELATED ARTICLES

Related Articles

TRENDING ARTICLES