Wednesday, January 22, 2025

ಕನ್ನಡಿಗರಿಗೆ ಸಿಹಿಸುದ್ದಿ: ಲೋಕಸಭಾ ಕಲಾಪಕ್ಕೆ ಕನ್ನಡದ ಸೊಗಡು!

ದೆಹಲಿ: ಲೋಕಸಭೆಯ ಅಧಿವೇಶನದಲ್ಲಿ ಇನ್ನು ಮುಂದೆ ಕನ್ನಡದ ಕಂಪು ಇನ್ನಷ್ಟು ಇರಲಿದೆ. ಲೋಕಸಭೆಯ ಪ್ರತಿಯೊಂದು ಕಾರ್ಯಕಲಾಪವು ಕನ್ನಡ ಸೇರಿದಂತೆ 21 ಭಾಷೆಗಳಿಗೆ ಭಾಷಾಂತರಗೊಳ್ಳಲಿದೆ.

ಸಂಸತ್ತಿನ ಪೂರ್ಣ ಕಾರ್ಯಕಲಾಪಗಳನ್ನು ಭಾರತೀಯ ಭಾಷೆಗಳಲ್ಲಿ ಭಾಷಾಂತರ ಮಾಡಿಸುವ ಸಲುವಾಗಿ ಹೊಸ ಸಂಸತ ಭವನದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಅದಕ್ಕಾಗಿ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಿರುವ ಎಲ್ಲ ಭಾಷೆಗಳಲ್ಲೂ ತಲಾ ಐದು ಕನ್ಸಲ್ಟಂಟ್ ಹುದ್ದೆಗಳನ್ನು ಸೃಜಿಸಲಾಗಿದೆ.

ಇದನ್ನೂ ಓದಿ: BGS ಶಾಲೆಯಲ್ಲಿ ವಿಶೇಷ ಕಾರ್ಯಕ್ರಮ : ವಿದ್ಯಾರ್ಥಿಗಳಿಂದ ತಂದೆ-ತಾಯಿಗೆ ಪಾದ ಪೂಜೆ!

ಕೊಂಕಣಿ, ಮೈಥಿಲಿ, ಸಂಸ್ಕೃತ ಸೇರಿದಂತೆ ಹಲವು ಭಾಷೆಗಳ 64 ಭಾಷಾಂತರಕಾರರಿಗೆ ಈ ವರ್ಷದ ಜೂನ್ ಜುಲೈ ತಿಂಗಳಲ್ಲಿ ತರಬೇತಿ ನೀಡಲಾಗಿದೆ. ಈ ಪೈಕಿ, ಕನ್ನಡ, ತಮಿಳು, ತೆಲುಗು, ಗುಜರಾತ್ ಸೇರಿದಂತೆ 10 ಭಾಷೆಗಳಿಗೆ ಕಾರ್ಯಕಲಾಪವು ಮುಂದಿನ ಸೋಮವಾರದಿಂದ ಭಾಷಾಂತರಗೊಳ್ಳಲಿದೆ. ಇದಲ್ಲದೆ, ಲೋಕಸಭೆಯ ಕಾರ್ಯಕಲಾಪ ಪಟ್ಟಿಯು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮುದ್ರಣಗೊಳ್ಳುತ್ತಿತ್ತು. ಇದೀಗ, ಕನ್ನಡದಲ್ಲಿ ಕಾರ್ಯಕಲಾಪ ಪಟ್ಟಿ ಮುದ್ರಣಗೊಳ್ಳುತ್ತಿದೆ.

RELATED ARTICLES

Related Articles

TRENDING ARTICLES