Wednesday, January 22, 2025

ಶಿವಣ್ಣನನ್ನು ಭೇಟಿಯಾದ ನ್ಯಾಚುರಲ್​ ಸ್ಟಾರ್ ನಾನಿ!

ಬೆಂಗಳೂರು: ಟಾಲಿವುಡ್​ ಸ್ಟಾರ್​ ನಾಯಕ ನಟ ನಾನಿ ಇಂದು ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್ ಅವರ ಮನೆಗೆ ತೆರಳಿ ಭೇಟಿಯಾಗಿದ್ದಾರೆ.

“ಹಾಯ್​ ನಾನ್ನ” ಸಿನಿಮಾವು ಡಿಸೆಂಬರ್​ 7 ರಂದು ಬಿಡುಗಡೆಯಾಗುತ್ತಿದೆ, ಈ ಹಿನ್ನೆಲೆ ಚಿತ್ರದ ಪ್ರಮೋಷನ್​ ಗಾಗಿ ಬೆಂಗಳೂರಿಗೆ ಆಗಮಿಸಿರುವ ನಟ ನಾನಿ, ಇಂದು ಶಿವಣ್ಣನ ಮನೆಗೆ ಭೇಟಿ ನೀಡಿ ಕೆಲಕಾಲ ಕುಷಲೋಪರಿ ಮಾತುಕತೆ ನಡೆಸಿದ್ದಾರೆ.

ಈ ವೇಳೆ ರಾಜ್ಯದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಿವರಾಜ್​ ಕುಮಾರ್​ ಪತ್ನಿ ಗೀತಾ ಶಿವರಾಜ್​ ಕುಮಾರ್​ ಕೂಡ ಜೊತೆಗಿದ್ದರು.

ಹಾಯ್​ ನಾನ್ನ ಡಿ.7ಕ್ಕೆ ಬಿಡುಗಡೆ : 

ನ್ಯಾಚುರಲ್​ ಸ್ಟಾರ್​ ನಾನಿಯ 30ನೇ ಸಿನಿಮಾ ಹಾಯ್​ ನಾನ್ನ ಚಿತ್ರಚು ಕ್ರೇಜಿ ಕಾನ್ಸೆಪ್ಟ್​ನೊಂದಿಗೆ ತೆರೆಗೆ ಬರಲಿದೆ, ಈ ಚಿತ್ರಕ್ಕೆ ಸೆನ್ಸಾರ್​ ಮಂಡಳಿಯು “U” ಸರ್ಟಿಫಿಕೇಟ್​ ನೀಡಿದೆ. ಈ ಚಿತ್ರವು 2 ಗಂಟೆ 35 ನಿಮಿಷಗಳಿದೆ. ಇನ್ನೂ ಈ ಚಿತ್ರದಲ್ಲಿ ಮೃಣಾಲ್​ ಠಾಕೂರ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ನಾನಿ ಮಗಳ ಪಾತ್ರದಲ್ಲಿ ಬೇಬಿ ಕಿಯಾರ ಖನ್ನಾ ನಟಿಸಿದ್ದಾರೆ. ಇನ್ನೂ ಈ ಚಿತ್ರ ಇದೇ ಡಿ.7 ರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದ್ದು ಈ ಚಿತ್ರವು ಸಿನಿ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿದೆ.

RELATED ARTICLES

Related Articles

TRENDING ARTICLES