ಬೆಂಗಳೂರು: ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ನಡೆಸಿದೆ.
ರಾಜ್ಯದ 63 ಕಡೆ 13 ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿದ್ದು, ಭ್ರಷ್ಟ ಅಧಿಕಾರಿಗಳ ಚಳಿ ಬಿಡಿಸಿದ್ದಾರೆ. ಬೆಂಗಳೂರಿನ ಅಮೃತ ಹಳ್ಳಿ ವಿಭಾಗದ ಬೆಸ್ಕಾಂ EE ಚೆನ್ನಕೇಶವ ಮನೆ ಮೇಲೆ ಲೋಕಾಯುಕ್ತ ರೇಡ್ ಮಾಡಿದೆ.
ಇದನ್ನೂ ಓದಿ: ಶಿವಣ್ಣನನ್ನು ಭೇಟಿಯಾದ ನ್ಯಾಚುರಲ್ ಸ್ಟಾರ್ ನಾನಿ!
ದಾಳಿ ವೇಳೆ 1.5. ಕೋಟಿ ಮೌಲ್ಯದ ಚಿನ್ನ, ಬೆಳ್ಳಿ, ವಜ್ರ ಮತ್ತು ನಗದು ಪತ್ತೆಯಾಗಿದೆ. ಸುಮಾರು 6 ಲಕ್ಷ ನಗದು, 3 ಕೆ.ಜಿ ಚಿನ್ನ, 28 ಕೆ.ಜಿ ಬೆಳ್ಳಿ, ಹಾಗೂ 25 ಲಕ್ಷ ಮೌಲ್ಯದ ವಜ್ರ ಪತ್ತೆಯಾಗಿದೆ. ಇನ್ನು ಸುಮಾರು 5 ಲಕ್ಷ ರೂ. ಮೌಲ್ಯದ 7 ಪುರಾತನ ವಸ್ತುಗಳು ಪತ್ತೆಯಾಗಿವೆ.