Friday, May 17, 2024

ಗೋವಾದಲ್ಲಿ ಕನ್ನಡ ತಾರೆಯರಿಗೆ ಅವಮಾನ : ಕೊನೆಗೂ ಕ್ಷಮೆಯಾಚಿಸಿದ ಸುರೇಶ್ ಕೊಂಡೇಟಿ

ಬೆಂಗಳೂರು : ಗೋವಾದಲ್ಲಿ ನಡೆದ ಸಂತೋಷಂ ಅವಾರ್ಡ್ಸ್ ಫಂಕ್ಷನ್ ನಲ್ಲಿ ಕನ್ನಡ ತಾರೆಯರಿಗೆ ಅವಮಾನವಾಗಿದ್ದು, ಅಲ್ಲಿ ಆದಂತಹ ಎಡವಟ್ಟುಗಳಿಗೆ ಆಯೋಜಕ ಸುರೇಶ್ ಕೊಂಡೇಟಿ ಕ್ಷಮೆ ಕೇಳಿದ್ದಾರೆ‌.

ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, 1,200 ಮಂದಿ ಸೆಲೆಬ್ರಿಟೀಸ್​ಗೆ ಸ್ ಗೆ ಆತಿಥ್ಯ ನೀಡೋದ್ರಲ್ಲಿ ಏರುಪೇರಾಗಿದೆ. ಇದು ಉದ್ದೇಶಪೂರ್ವಕವಾಗಿ ಆಗಿರೋದಲ್ಲ. ದಯವಿಟ್ಟು ಅರ್ಥ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.

ನನಗೆ ನಾಲ್ಕು ಚಿತ್ರರಂಗದ ತಾರೆಯರೆಲ್ಲಾ ಒಂದೇ. ಅದರಲ್ಲಿ ಯಾವುದೇ ತಾರತಮ್ಯ ಇಲ್ಲ. ಕಂಪ್ಲೀಟ್ ಆಗಿ ಇದು ನಾನೊಬ್ಬನೇ ನೀಡ್ತಾ ಬರ್ತಿರೋ ಪ್ರಶಸ್ತಿ ಪ್ರದಾನ ಸಮಾರಂಭ.‌ಇದಕ್ಕೂ ತೆಲುಗು ಚಿತ್ರರಂಗಕ್ಕೂ ಸಂಬಂಧವಿಲ್ಲ. ನನ್ನಿಂದ ತೊಂದರೆಗೊಳಗಾದ ಪ್ರತಿಯೊಬ್ಬರಿಗೂ ಕ್ಷಮೆ ಯಾಚಿಸುತ್ತೇನೆ ಎಂದು ಸುರೇಶ್ ಕೊಂಡೇಟಿ ಸ್ಪಷ್ಟನೆ ನೀಡಿದ್ದಾರೆ.

35 ಮಂದಿ ಕನ್ನಡಿಗರಿಗೆ ಅವಮಾನ

ಇತ್ತೀಚೆಗೆ ಗೋವಾದಲ್ಲಿ ‘ಸಂತೋಷಂ ಅವಾರ್ಡ್ ಸೌತ್ ಇಂಡಿಯಾ ಫಿಲ್ಮ್ ಅವಾರ್ಡ್ಸ್’ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕಾಗಿ ನಟ ರಮೇಶ್ ಅರವಿಂದ್, ಸಪ್ತಮಿ ಗೌಡ, ರಾಜವರ್ಧನ್, ಬಿ. ಸುರೇಶ್, ಶೈಲಜಾ ನಾಗ್ ಸೇರಿದಂತೆ ಹಲವರು ಗೋವಾಗೆ ತೆರಳಿದ್ದರು. ಆದರೆ, ಕನ್ನಡ ತಾರೆಯರಿಗೆ ಸರಿಯಾದ ವ್ಯವಸ್ಥೆ ಇಲ್ಲದೇ ಸುಮಾರು 30ರಿಂದ 35 ಮಂದಿ ಕನ್ನಡಿಗರಿಗೆ ಅವಮಾನ ಮಾಡಲಾಗಿತ್ತು.

RELATED ARTICLES

Related Articles

TRENDING ARTICLES