Wednesday, January 22, 2025

ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರನ ಸಹಚರರಿಂದಲೇ ಹಲ್ಲೆ : ಬಿ.ವೈ. ವಿಜಯೇಂದ್ರ

ಬೆಳಗಾವಿ : ಇಡೀ ಸರ್ಕಾರವೇ ಇಲ್ಲಿದ್ದ ಸಂದರ್ಭದಲ್ಲಿ ಹಾಡಹಗಲೇ ಬಿಜೆಪಿ ಕಾರ್ಯಕರ್ತನ ಮೇಲೆ ಈ ರೀತಿ ದರ್ಪ ತೋರಿರುವುದು ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರನ ಸಹಚರರಿಂದಲೇ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದೆ. ಈ ಎಂಎಲ್ಸಿ ಪ್ರಭಾವಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ. ಇಷ್ಟು ಪ್ರಭಾವದಿಂದಲೇ ಹಾಡುಹಗಲೇ ಹಲ್ಲೆ ಮಾಡಿರುವುದು ಎಂದು ದೂರಿದ್ದಾರೆ.

ರಾಜ್ಯ ಕಾರ್ಯಕಾರಿಣಿ ಸದಸ್ಯ ಹಾಗೂ ಎಸ್‌ಸಿ ಮೋರ್ಚಾ ಕಾರ್ಯಕರ್ತರಾದ ಪೃಥ್ವಿ ಸಿಂಗ್ ಅವರ ಮೇಲೆ ವಿಧಾನಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಅವರ ಗನ್ ಮ್ಯಾನ್‌ಗಳು ಹಲ್ಲೆ ಮಾಡಿದ್ದಾರೆ. ನಮ್ಮ ಕಾರ್ಯಕರ್ತ ಪೃಥ್ವಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ನಾವು ಘಟನೆಯನ್ನು ಗಂಭೀರವಾಗಿ ತಗೆದುಕೊಂಡಿದ್ದೇವೆ. ಮೊಬೈಲ್ ರೆಕಾರ್ಡ್ ಮಾಡುತ್ತಿದ್ದ ಪೃಥ್ವಿ ಅವರ ಮೊಬೈಲ್ ಕಸಿದು‌ ಮಾರಣಾಂತಿಕ ಹಲ್ಲೆ ನಡೆಸಿದ್ದು ಖಂಡನೀಯ. ರಾಜ್ಯ ಸರ್ಕಾರದ ಎಲ್ಲ ಶಾಸಕರು ಇಲ್ಲೇ ಇದ್ದಾರೆ. ಈ ರೀತಿ ದಲಿತ‌ ಮುಖಂಡ ಮೇಲೆ ಮಾರಣಾಂತಿಹಲ್ಲೆ ಯಾಕೆ ಆಗಿದೆ ಅಂತ ಸತ್ಯಾಂಶ ಹೊರಬೇಕು ಎಂದು ಆಗ್ರಹಿಸಿದ್ದಾರೆ.

ತಕ್ಷಣ ಪ್ರಕರಣ ದಾಖಲಿಸಿ, ಬಂಧಿಸಬೇಕು

ಕಾರಣ ಏನೇ ಇರಲಿ. ಆದರೆ, ಮನೆಗೆ ನುಗ್ಗಿ ಪುಢಾರಿಗಳಿಗೆ ಕಳಿಸಿ ಈ ರೀತಿ ಹಲ್ಲೆ ಮಾಡುತ್ತಾರೆ ಅಂದರೆ ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಯಾವ ರೀತಿ ಇದೆ ಅಂತ ತೋರಿಸುತ್ತೆ. ಮುಖ್ಯಮಂತ್ರಿ ಅವರಿಗೆ ಆಗ್ರಹ ಮಾಡುತ್ತೇನೆ, ತಕ್ಷಣ ಎಂಎಲ್ಸಿ ಹಾಗೂ ಸಹಚರರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಬೇಕು. ಬಂಧಿಸದಿದ್ದರೆ ರಾಜ್ಯದ ಎಲ್ಲ ಕಡೆ ಬಿಜೆಪಿ ಕಾರ್ಯಕರ್ತರು ರಸ್ತೆ ಮೇಲೆ ಪ್ರತಿಭಟನೆ ಮಾಡುವರು. ಅಧಿಕಾರದ ಸೊಕ್ಕಿನಿಂದ ಮೆರಿತಾ ಇರುವ ಕೆಲವು ಪುಢಾರಿಗಳಿಗೆ ಬಂಧಿಸಬೇಕು. ಗೃಹ ಸಚಿವರು ಇದನ್ನು ಗಂಭೀರವಾಗಿ ಕ್ರಮ ತಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES