Monday, December 23, 2024

ತೆಲಂಗಾಣದಲ್ಲಿ ನಾವೆಲ್ಲರೂ ಒಗ್ಗೂಡಿ ಪಕ್ಷವನ್ನು ಗೆಲ್ಲಿಸಿದ್ದೇವೆ : ಸಚಿವ ಜಮೀರ್ ಅಹ್ಮದ್ ಖಾನ್

ಹೈದರಾಬಾದ್: ನಾವೆಲ್ಲರೂ ಒಗ್ಗೂಡಿಸಿ ತೆಲಂಗಾಣದಲ್ಲಿ ಪಕ್ಷವನ್ನು ಗೆಲ್ಲಿಸಿದ್ದೇವೆ. ಎಂದು ಸಚಿವ ಜಮೀರ್​ ಅಹ್ಮದ್​ ಖಾನ್ ಹೇಳಿದ್ದಾರೆ. 

ತೆಲಂಗಾಣದಲ್ಲಿ ನಮ್ಮ ಕಾಂಗ್ರೆಸ್​ಗೆ ಜನರು ಆಶೀರ್ವಾದ ಮಾಡಿದ್ದಾರೆ. 70ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. ಸಿದ್ದರಾಮಯ್ಯ, ಡಿಕೆ & ನಾನು ಟೀಂ ವರ್ಕ್​ ಆಗಿ ಕೆಲಸ ಮಾಡಿದ್ದೇವೆ ಎಂದರು. ‘

ಇದನ್ನೂ ಓದಿ: ಇದು ನಮ್ಮ ಪಕ್ಷದ ಗೆಲುವು ಅಲ್ಲ, ತೆಲಂಗಾಣ ಜನತೆಯ ಗೆಲುವು : ಡಿ.ಕೆ.ಶಿವಕುಮಾರ್ 

ಎಐಎಂಐಎಂ ಪಕ್ಷ ಗ್ರಾಮೀಣ ಭಾಗದಲ್ಲಿ ಪ್ರಾಬಲ್ಯತೆ ಹೊಂದಿಲ್ಲ. ತೆಲಂಗಾಣದಲ್ಲಿ ನಗರ ಪ್ರದೇಶದಲ್ಲಿ ಮಾತ್ರ ಅದು ಪ್ರಬಲವಾಗಿದೆ. ನಮ್ಮ ಪ್ರಯತ್ನ ಮಾಡಿದ್ದೇವೆ, ಜನರು ತೀರ್ಮಾನ ಮಾಡಿದ್ದಾರೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢ್​ದಲ್ಲಿ ನಾವು ಸೋತಿದ್ದೇವೆ ಎಂದರು.

ಇದು ನಮ್ಮ ಪಕ್ಷದ ಗೆಲುವು ಅಲ್ಲ, ತೆಲಂಗಾಣ ಜನತೆಯ ಗೆಲುವು 

ಪಂಚರಾಜ್ಯದ ಚುನಾವಣೆಯಲ್ಲಿ ತೆಲಂಗಾಣ  ಕಾಂಗ್ರೆಸ್ ಮುನ್ನಡೆಯಲ್ಲಿ ಸಾಗುತ್ತಿರುವುದು ಸಂತಸದ ವಿಚಾರವಾಗಿದೆ. ಇಂದು ನಮ್ಮ ಪಕ್ಷದ ಗೆಲುವು ಅಲ್ಲ, ತೆಲಂಗಾಣದ ಜನತೆಯ ಗೆಲವು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನೂ ತೆಲಂಗಾಣದಲ್ಲಿ ಮತದಾರರು ಬದಲಾವಣೆ ಬಯಸಿದ್ದಾರೆ. ಅನೇಕ ರಾಜ್ಯಗಳಿಂದ ನಾಯಕರು ಬಂದು ನಮ್ಮ ಶಾಸಕರನ್ನು ಕರೆದುಕೊಂಡು ಬರುವ ಕೆಲಸ ಮಾಡಿದ್ದಾರೆ. ತೆಲಂಗಾಣದ ಜನರು ಪ್ರತ್ಯೇಕ ರಾಜ್ಯ ಕೊಟ್ಟಿದ್ದಕ್ಕೆ ಗೆಲ್ಲಿಸಿದ್ದಾರೆ. ಸೋನಿಯಾ ಗಾಂಧಿಗೆ ಕೃತಜ್ಞತೆಯಾಗಿ ಕಾಂಗ್ರೆಸ್​ ಗೆಲ್ಲಿಸಿದ್ದಾರೆ ಎಂದು ​ಹೇಳಿದ್ದಾರೆ.

 

RELATED ARTICLES

Related Articles

TRENDING ARTICLES