Monday, December 23, 2024

Telangana Assembly Election Result : KCR ಕೋಟೆಯಲ್ಲಿ ‘ಕೈ’ ಕಮಾಲ್‌

ಹೈದರಾಬಾದ್‌: ಮತಗಟ್ಟೆ ಸಮೀಕ್ಷೆಗಳು ನೀಡಿದ ವರದಿ ನಿಜವಾಗಿದ್ದು,ತೆಲಂಗಾಣದಲ್ಲಿ ಸ್ವಷ್ಟಬಹುಮತ ಬರುವುದು ಗ್ಯಾರಂಟಿಯಾಗಿದೆ.

ವಿಧಾನಸಭೆ ಚುನಾವಣೆ ನಡೆದ ಐದು ರಾಜ್ಯಗಳ ಪೈಕಿ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್‌ಗಢದ ಫಲಿತಾಂಶ ಭಾನುವಾರ ಹೊರಬೀಳಲಿದೆ. ಮಿಜೋರಾಂನಲ್ಲಿ ಮಾತ್ರ ಮತ ಎಣಿಕೆ ಸೋಮವಾರ ನಡೆಯಲಿದೆ.

ಇಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ಭರದಿಂದ ಸಾಗುತ್ತಿದ್ದು, 63 ಸ್ಥಾನಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದರೆ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷವು 41, ಬಿಜೆಪಿ 8ರಲ್ಲಿ ಹಾಗೂ 7ರಲ್ಲಿ ಪಕ್ಷೇತರ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.

ಇದನ್ನೂ ಓದಿ: ತೆಲಂಗಾಣದಲ್ಲಿ ನಾವೆಲ್ಲರೂ ಒಗ್ಗೂಡಿ ಪಕ್ಷವನ್ನು ಗೆಲ್ಲಿಸಿದ್ದೇವೆ : ಸಚಿವ ಜಮೀರ್ ಅಹ್ಮದ್ ಖಾನ್

ತೆಲಂಗಾಣದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಲಿದೆ ಎಂದು ಬಹುತೇಕ ಮತಗಟ್ಟೆ ಸಮೀಕ್ಷೆಗಳು ಹೇಳಿವೆ. 119 ಸ್ಥಾನಗಳಲ್ಲಿ 60 ರಿಂದ 70 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದವು.

2018ರ ಕಳೆದ ವಿಧಾನಸಭಾ ಚುನಾವಣೆಯಲ್ಲಿ 119 ಸ್ಥಾನಗಳ ಪೈಕಿ 88ರಲ್ಲಿ ಬಿಆರ್‌ಎಸ್ ಗೆಲುವು ಕಂಡಿತ್ತು (ಶೇ 46.87ರಷ್ಟು ಮತ ಪಡೆಯಿತು), ಕಾಂಗ್ರೆಸ್ ಪಕ್ಷವು 19 ಸ್ಥಾನಗಳೊಂದಿಗೆ (ಶೇ 28.43ರಷ್ಟು ಮತ) ಎರಡನೆಯ ಸ್ಥಾನ ಪಡೆದಿತ್ತು.

ಇದನ್ನೂ ಓದಿ: ಡಿ.ಕೆ. ಶಿವಕುಮಾರ್ ಪ್ರಯತ್ನ ದೇಶದಲ್ಲಿ ಎಲ್ಲೂ ಸಫಲವಾಗಲ್ಲ : ಮಾಜಿ ಸಚಿವ ಈಶ್ವರಪ್ಪ

ಎಐಎಂಐಎಂ ಪಕ್ಷ 7 ಸ್ಥಾನ (ಶೇ 2.71ರಷ್ಟು ಮತ), ಬಿಜೆಪಿ 1 ಸ್ಥಾನ (ಶೇ6.98ರಷ್ಟು ಮತ) ಪಡೆದಿದ್ದವು. ಇತರರು 4 ಸ್ಥಾನ (ಶೇ 15.01ರಷ್ಟು ಮತ) ಪಡೆದಿದ್ದರು. ಈ ಚುನಾವಣೆಯಲ್ಲಿ ಒಟ್ಟಾರೆ ಶೇ73.7ರಷ್ಟು ಮತದಾನ ನಡೆದಿತ್ತು. ತೆಲಂಗಾಣ ವಿಧಾನಸಭೆಯ ಮ್ಯಾಜಿಕ್ ನಂಬರ್ 60. ಕಣದಲ್ಲಿದ್ದ ಪ್ರಮುಖ ನಾಯಕರು  ತೆಲಂಗಾಣ ಮುಖ್ಯಮಂತ್ರಿ, ಬಿಆರ್‌ಎಸ್ ನಾಯಕ ಕೆ.ಚಂದ್ರಶೇಖರ್ ರಾವ್, ಬಿಆರ್‌ಎಸ್ ಪಕ್ಷದ ಕಾರ್ಯಾಧ್ಯಕ್ಷ, ಕೆಸಿಆರ್ ಪುತ್ರ ಕೆ.ಟಿ.ರಾಮ ರಾವ್, ಕಾಂಗ್ರೆಸ್‌ನಿಂದ ಎ. ರೇವಂತ್ ರೆಡ್ಡಿ ಹಾಗೂ ಬಿಜೆಪಿಯಿಂದ ಬಂಡಿ ಸಂಜಯ್‌ಕುಮಾರ್ ಅವರು ಕಣಕ್ಕಿಳಿದಿದ್ದರು.

 

RELATED ARTICLES

Related Articles

TRENDING ARTICLES