Thursday, January 23, 2025

ಚುನಾವಣಾ ಫಲಿತಾಂಶ: ಮತ್ತೊಮ್ಮೆ ಮೋದಿ ಪ್ರಧಾನಿ ಗ್ಯಾರೆಂಟಿ – ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ

ನವದೆಹಲಿ: ಪಂಚರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದ ಕುರಿತು ಇಂದು ಕರ್ನಾಟಕದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ದೆಹಲಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಎಂದು ಇಂಡಿಯಾ ಕೂಟ ಬೊಬ್ಬೆ ಹೊಡೆಯುತಿದ್ದವು. ಆದರೇ, ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಅಂತಾ ಚುನಾವಣೆ ಮೂಲಕ ಜನ ಉತ್ತರ ಕೊಟ್ಟಿದ್ದಾರೆ. ಪಂಚ ರಾಜ್ಯಗಳ ಚುನಾವಣೆ ಸೆಮಿಫೈನಲ್ ಅಂತಾ ವ್ಯಾಖ್ಯಾನಿಸ್ತಿದ್ದರು ಮತ್ತೊಮ್ಮೆ ಬಿಜೆಪಿ ಅಲೆ ಎದ್ದಿದೆ ಅನ್ನೊದು ಗೋಚರವಾಗ್ತಿದೆ ಎಂದರು.

ಇದನ್ನು ಓದಿ: ತೆಲಂಗಾಣ ಕಾಂಗ್ರೆಸ್​ ಕಚೇರಿ ಮುಂದೆ ಕಾರ್ಯಕರ್ತರ ಸಂಭ್ರಮಾಚರಣೆ!

ಈ ಅಲೆ ಇಲ್ಲಿಗೆ ನಿಲ್ಲುವುದಿಲ್ಲ, ಮುಂದಿನ ಲೋಕಸಭೆ ಚುನಾವಣೆವರೆಗೆ ಹೋಗಲಿದೆ ದೇಶದ ಜನ ದೇಶ ರಕ್ಷಣೆ ಬಗ್ಗೆ ಬಯಸ್ತಿದ್ದಾರೆ, ಇದು ಕಾಂಗ್ರೆಸ್ ಪಕ್ಷಕ್ಕೂ ಗೊತ್ತಾಗುತ್ತಿದೆ, ಕರ್ನಾಟಕದಲ್ಲಿ ಗ್ಯಾರೆಂಟಿ ಆಮಿಷ ಒಡ್ಡಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದಿದೆ ಇದರಿಂದ ರಾಜ್ಯದ ಜನ ಈಗ ಪಶ್ಚಾತ್ತಾಪ ಪಡ್ತಿದ್ದಾರೆ.

ಮತ್ತೊಮ್ಮೆ ವಿಶ್ವಾಸದಿಂದ ಹೇಳ್ತಿದ್ದೇನೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ & ಜೆಡಿಎಸ್ ಒಟ್ಟಾರೆ 28ಕ್ಕೆ 28 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಸದ್ಯ ಈ ಫಲಿತಾಂಶ ದೇಶಕ್ಕೆ ಮೋದಿ ನಾಯಕತ್ವ ಅಗತ್ಯವಿದೆ ಅಭಿವೃದ್ಧಿ ಪಥದಲ್ಲಿ ದೇಶ ಸಾಗಬೇಕು ಅಂತಾ ಜನ ನಿರ್ಧರಿಸಿದ್ದಾರೆ ಎಂದರು.

ತೆಲಂಗಾಣದಲ್ಲಿ ಬಿಜೆಪಿಗೆ ಬಹಳ ನಿರೀಕ್ಷೆ ಇರಲಿಲ್ಲ ಕರ್ನಾಟಕ ಬಿಜೆಪಿ ಫಲಿತಾಂಶ ಆ ರಾಜ್ಯದಲ್ಲಿ ಎಫಕ್ಟ್ ಆಗಿತ್ತು ತೆಲಂಗಾಣದಲ್ಲಿ ಲೋಕಸಭೆ ಚುನಾವಣೆಯಲ್ಲಿ ಈ ಫಲಿತಾಂಶ ವರ್ಕ್ ಆಗಿಲ್ಲ
ಗ್ಯಾರೆಂಟಿ ವರ್ಕ್ ಆಗೊದಿದ್ರೆ ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್​ಘಢದಲ್ಲಿ ಆಗಬೇಕಿತ್ತು ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES