Wednesday, January 22, 2025

ಅನಿಮಲ್​ ಮೂವಿ ​:​ ರಣಬೀರ್-ರಶ್ಮಿಕಾ  ರೊಮ್ಯಾನ್ಸ್ ನೋಡಿ ಆಲಿಯಾ ಗರಂ!

ಫಿಲ್ಮಿ ಡೆಸ್ಕ್​: ರಣಬೀರ್ ಕಪೂರ್-ರಶ್ಮಿಕಾ ನಟನೆಯ ಅನಿಮಲ್ ಸಿನಿಮಾ ಶುಕ್ರವಾರ ತೆರೆಗೆ ಬಂದಿದ್ದು ವರ್ಲ್ಡ್ ವೈಡ್ ಬಿಗ್ಗೆಸ್ಟ್ ಓಪನಿಂಗ್ ಪಡೆದುಕೊಂಡಿದೆ. ಬಾಕ್ಸ್​ ಆಫೀಸ್​​ನಲ್ಲೂ ಬ್ಯಾಂಗ್ ಮಾಡ್ತಾ ಇದೆ. ಆದ್ರೆ ಈ ಸಂತಸದ ಸಮಯದಲ್ಲೂ ರಣಬೀರ್ ಪತ್ನಿ, ಆಲಿಯಾ ಸಿನಿಮಾ ನೋಡಿ ಕಿಡಿಕಿಡಿಯಾದ್ರಾ. ಅದ್ರಲ್ಲೂ ಅನಿಮಲ್ ನಾಯಕಿ ರಶ್ಮಿಕಾ ಮೇಲೆ ಗರಂ ಆದ್ರಾ. ಈ ಬಗ್ಗೆ ಬಾಲಿವುಡ್ ಅಂಗಳದಲ್ಲಿ ಹರಿದಾಡ್ತಾ ಇರೋ ಲೇಟೆಸ್ಟ್ ಗಾಸಿಪ್ ಇಲ್ಲಿದೆ ನೋಡಿ.

ದೊಡ್ಡ ನಿರೀಕ್ಷೆಯೊಂದಿಗೆ ಬಂದ ಅನಿಮಲ್ ಸಿನಿಮಾ ಅಷ್ಟೇ ದೊಡ್ಡ ಓಪನಿಂಗ್ ಪಡೆದುಕೊಂಡಿದೆ. ವಿಶ್ವದಾದ್ಯಂತ 6000 ಕ್ಕೂ ಅಧಿಕ ಸ್ಕ್ರೀನ್​ಗಳಲ್ಲಿ ರಿಲೀಸ್ ಆಗಿರೋ ಅನಿಮಲ್ ಮೊದಲ ದಿನವೇ ದಾಖಲೆ ಗಳಿಕೆ ಮಾಡಿದೆ. ಮೊದಲ ದಿನದ ಅಂತ್ಯಕ್ಕೆ ವಿಶ್ವದಾದ್ಯಂತ ಬರೊಬ್ಬರಿ 116 ಕೋಟಿ ಗಳಿಕೆ ಮಾಡಿದೆ ಅನಿಮಲ್.

ಸಿನಿಮಾ ನೋಡಿದ ಫ್ಯಾನ್ಸ್ ಅಂತೂ ಚಿತ್ರಕ್ಕೆ ಅದ್ಭುತ ಅನ್ನೋ ಪ್ರತಿಕ್ರಿಯೆ ಕೊಡ್ತಾ ಇದ್ದಾರೆ. ಬರೊಬ್ಬರಿ 3 ಗಂಟೆ 21 ನಿಮಿಷಗಳ ಧೀರ್ಘಾವಧಿಯ ಚಿತ್ರವಾದ್ರೂ , ಎಲ್ಲೂ ಬೋರ್ ಹೊಡೆಯಲ್ಲ ಅಂತಿರೋ ಫ್ಯಾನ್ಸ್ ರಣಬೀರ್ ಕಪೂರ್ ಪರ್ಫಾರ್ಮೆನ್ಸ್​ಗಂತೂ ಫುಲ್ ಮಾರ್ಕ್ಸ್ ಕೊಡ್ತಾ ಇದ್ದಾರೆ. ಸಂಜು ಬಳಿಕ ರಣಬೀರ್ ಮತ್ತೊಮ್ಮೆ ಮ್ಯಾಸಿವ್ ಪರ್ಫಾರ್ಮೆನ್ಸ್ ಕೊಟ್ಟಿದ್ದಾರೆ ಅಂತ ಕೊಂಡಾಡ್ತಾ ಇದ್ದಾರೆ.

ಇದನ್ನೂ ಓದಿ: ಬೆಳಂ ಬೆಳಗ್ಗೆ ಚಾಮುಂಡಿ ದರ್ಶನ ಪಡೆದ ನಟ ರಾಮ್ ಚರಣ್ ತೇಜ್!

ಅನಿಮಲ್ ರಣಬೀರ್ ಕಪೂರ್ ಪಾಲಿಗೆ ಸಂಜು ನಂತರ ಮತ್ತೊಂದು  ಇಂಡಸ್ಟ್ರಿ ಹಿಟ್ ಆಗಲಿದೆ ಅಂತಿದಾರೆ ಬಾಕ್ಸ್​ ಆಫೀಸ್ ಪಂಡಿತರು. ಆದರೇ, ಇಂಥಾ ಖುಷಿ ಸಮಯದಲ್ಲೂ ರಣಬೀರ್ ಪತ್ನಿ ಆಲಿಯಾ ಮಾತ್ರ ಗರಂ ಆಗಿದ್ದಾರಾ. ಹೌದು ಅಂತಿದೆ ಬಾಲಿವುಡ್ ಅಂಗಳ.

ರಣಬೀರ್-ರಶ್ಮಿಕಾ  ರೊಮ್ಯಾನ್ಸ್ ನೋಡಿ ಆಲಿಯಾ ಶಾಕ್..? ರಶ್ಮಿಕಾ ಮೇಲೆ ಆಲಿಯಾ ಗರಂ!

ಯೆಸ್, ಅನಿಮಲ್ ಸಿನಿಮಾದ ಪ್ರೀಮಿಯರ್ ಶೋನಲ್ಲಿ ನಡೆದ ಒಂದು ಘಟನೆ ಸದ್ಯ ಬಾಲಿವುಡ್ ಅಂಗಳದಲ್ಲಿ ಬಿಸಿ ಬಿಸಿ ಚರ್ಚೆ ಹುಟ್ಟಿಹಾಕಿದೆ. ಚಿತ್ರವನ್ನ ನೋಡಿ ಹೊರ ಬರ್ತಿದ್ದ ಆಲಿಯಾಗೆ ರಶ್ಮಿಕಾ ಮುಖಾಮುಖಿಯಾಗ್ತಾರೆ. ಔಪಚಾರಿಕವಾಗಿ ರಶ್ಮಿಕಾನ ಆಲಿಯಾ ಹಗ್ ಮಾಡಿದ್ರೂ ಅವರ ಮೊಗದಲ್ಲಿ ಅಸಹನೆ ಎದ್ದು ಕಾಣ್ತಾ ಇದೆ. ಈ ವಿಡಿಯೋ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ಸವತಿಯನ್ನ ಕಂಡು ಮುಖ ತಿರುಗಿಸುವಂತೆ ಆಲಿಯಾ ಎಕ್ಸ್​ಪ್ರೆಷನ್ ಕೊಟ್ಟಿದ್ದಾರೆ ಅಂತ ನೆಟ್ಟಿಗರು ಕಾಮೆಂಟ್ ಮಾಡ್ತಾ ಇದ್ದಾರೆ. ಇದಕ್ಕೆ ಕಾರಣವನ್ನೂ ಕಂಡುಕೊಂಡಿದ್ದಾರೆ. ಅನಿಮಲ್ ಸಿನಿಮಾದಲ್ಲಿ ಭರ್ತಿ ರೊಮ್ಯಾನ್ಸ್ ದೃಶ್ಯಗಳಿವೆ. ಹಸಿ ಬಿಸಿ ಲಿಪ್ ಲಾಕ್ ದೃಶ್ಯಗಳಿವೆ. ರಣಬೀರ್ -ರಶ್ಮಿಕಾ ಮುತ್ತಿನ ಮತ್ತೇರಿಸೋ ಸೀನ್ಸ್ ಧಾರಾಳವಾಗಿವೆ.

ಈ ದೃಶ್ಯಗಳನ್ನ ನೋಡಿನೇ ಆಲಿಯಾ, ರಶ್ಮಿಕಾ ಮೇಲೆ ಮುನಿಸಿಕೊಂಡಿದ್ದಾರೆ ಅಂತ ನೆಟ್ಟಿಗರು ಸಂಶೋದನೆ ಮಾಡಿದ್ದಾರೆ. ಪತಿ ಬೇರೆ ಹೆಣ್ಣಿನ ಜೊತೆಗೆ ರೊಮ್ಯಾನ್ಸ್ ನೋಡಿದ್ರೆ ಯಾವ ಹೆಂಡ್ತಿಗೆ ತಾನೇ ಕಿರಿ ಕಿರಿ ಆಗಲ್ಲ ಹೇಳಿ. ಆದ್ರೆ ನೀವು ಕೂಡ ಒಬ್ಬ ನಟಿ. ಇದನ್ನ ವೃತ್ತಿಪರವಾಗಿ ತೆಗೆದುಕೊಳ್ಳಿ ಅಂತ ನೆಟ್ಟಿಗರು ಆಲಿಯಾಗೆ ಪಾಠ ಹೇಳ್ತಾ ಇದ್ದಾರೆ. ಎನೀ ಸದ್ಯ ಆಲಿಯಾ-ರಶ್ಮಿಕಾ ಕಿರಿಕ್ ವಿಚಾರ ಬಾಲಿವುಡ್​​ನಲ್ಲಿ ಹಾಟ್ ಟಾಪಿಕ್ ಆಗಿದೆ.

RELATED ARTICLES

Related Articles

TRENDING ARTICLES