Sunday, January 5, 2025

ಬೆಳಂ ಬೆಳಗ್ಗೆ ಚಾಮುಂಡಿ ದರ್ಶನ ಪಡೆದ ನಟ ರಾಮ್ ಚರಣ್ ತೇಜ್!

ಮೈಸೂರು: ಇಂದು ಮುಂಜಾನೆ ಟಾಲಿವುಡ್​ ಸ್ಟಾರ್​ ನಟ ರಾಮ್​ ಚರಂಣ್​ ತೇಜ್​ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದಿದ್ದಾರೆ.

ತೆಲುಗು ಭಾಷೆಯ ಬಹು ನಿರೀಕ್ಷಿತ ಗೇಮ್​ ಚೇಂಜರ್ ಸಿನಿಮಾ ಶೂಟಿಂಗ್​ ಮೈಸೂರಿನಲ್ಲಿ ನಡೆಯುತ್ತಿದ್ದು ನಟ ರಾಮ್​ ಚರಣ್ ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ವಾರಾಂತ್ಯವಾದ ಇಂದು (ಭಾನುವಾರ) ಬೆಳಗ್ಗೆ ಚಿತ್ರ ತಂಡದೊಂದಿಗೆ ನಾಡ ಅದಿದೇವತೆ ಚಾಮುಂಡೇಶ್ವರಿ ದರ್ಶನ ಪಡೆದರು. ​

ಇದನ್ನೂ ಓದಿ: ಚಾಮುಂಡಿ ಬೆಟ್ಟಕ್ಕೆ ಭೇಟಿ: ದೇವಿ ದರ್ಶನ ಪಡೆದ ರಾಹುಲ್ ದ್ರಾವಿಡ್ ದಂಪತಿ!

ಗೇಂಮ್ ಚೇಮಜರ್​ ಚಿತ್ರೀಕರಣ:

ಖ್ಯಾತ ತೆಲುಗು ನಟ ರಾಮ್ ಚರಣ್ ತೇಜ್​ ಮತ್ತು ಕಿಯಾರ ಅದ್ವಾನಿ ಮುಖ್ಯ ಭೂಮಿಕೆಯಲ್ಲಿ ತೆರೆಕಾಣಲು ಸಿದ್ದವಾಗುತ್ತಿರುವ ಬಹು ನಿರೀಕ್ಷಿತ ಗೇಮ್​ ಚೇಂಜರ್​ ಚಿತ್ರವು, ದಿಲ್​ ರಾಜು ಮತ್ತು ಸಿರೀಶ್​ ನಿರ್ಮಾಣದಲ್ಲಿ ಮೂಡಿಬರಲಿದೆ. ಈ ಚಿತ್ರವು ದೇಶ ವಿದೇಶಗಳಲ್ಲಿ ಚಿತ್ರೀಕರಣ ನಡೆಯುತ್ತಿದ್ದು ಇದೀಗ ಕರ್ನಾಟಕದ ಮೈಸೂರಿನ ಕೆಲವು ಕಡೆ ಚಿತ್ರೀಕರಣ ನಡೆಯುತ್ತಿದೆ ಸದ್ಯ ಚಿತ್ರ ತಂಡವು ಮೈಸೂರಿನಲ್ಲಿ ವಾಸ್ತವ್ಯ ಹೂಡಿದೆ.

RELATED ARTICLES

Related Articles

TRENDING ARTICLES