ಸಲಾರ್ ಟ್ರೈಲರ್ ಯೂಟ್ಯೂಬ್ನಲ್ಲಿ ಸಖತ್ ಸಂಚಲನ ಮೂಡಿಸಿದೆ. ಒಂದ್ಕಡೆ ಸೋಶಿಯಲ್ ಮೀಡಿಯಾಗಳಲ್ಲಿ ರಿವ್ಯೂವ್ಸ್ ಅಬ್ಬರವಾದ್ರೆ, ಮತ್ತೊಂದ್ಕಡೆ ಯೂಟ್ಯೂಬ್ ವೀವ್ಸ್. ಎರಡರ ಜುಗಲ್ಬಂದಿ ಸಖತ್ ಜೋರಿದೆ. ಎರಡು ಭಾಗಗಳಲ್ಲಿ ಬರ್ತಿರೋ ಸಲಾರ್ ಮೊದಲ ಭಾಗ ಮಾಡಿದ ಆಲ್ಟೈಂ ರೆಕಾರ್ಡ್ಸ್ ಏನು..? ಆನ್ಲೈನ್ ಟಿಕೆಟ್ ಬುಕ್ಕಿಂಗ್ಗೆ ಹೊಂಬಾಳೆ ಮಾಡಿರೋ ಮಾಸ್ಟರ್ಪ್ಲ್ಯಾನ್ ಏನು ಅನ್ನೋದ್ರ ಡಿಟೈಲ್ಡ್ ರಿಪೋರ್ಟ್ ನಿಮ್ಮ ಮುಂದೆ.
ಸಲಾರ್ ರಿವ್ಯೂಗಳ ಮಧ್ಯೆ ವೀವ್ಸ್ ಅಬ್ಬರ, ಆರ್ಭಟ
ಕೆಜಿಎಫ್ ಚಾಪ್ಟರ್-2 ಬಳಿಕ ಹೊಂಬಾಳೆ ಫಿಲಂಸ್ ಮಗದೊಮ್ಮೆ ಅದೇ ಕೆಜಿಎಫ್ ಕ್ಯಾಪ್ಟನ್ ಪ್ರಶಾಂತ್ ನೀಲ್ ಜೊತೆ ತಯಾರಿಸಿರೋ ಅಡುಗೆ ಈ ಸಲಾರ್ ಸೀಸ್ಫೈಯರ್-1. ಯೆಸ್.. ಬಾಹುಬಲಿ ಫೇಮ್ ಡಾರ್ಲಿಂಗ್ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ – ವಿಜಯ್ ಕಿರಗಂದೂರು ಕಾಂಬೋ ಅಂದಾಗ ಸಹಜವಾಗಿಯೇ ಕ್ರೇಜ್ ಮುಗಿಲುಮುಟ್ಟಿತ್ತು. ಅದಕ್ಕೆ ಪೂರಕವಾಗಿ ಟ್ರೈಲರ್ ಲಾಂಚ್ ಆಗಿದೆ.
ಇದನ್ನೂ ಓದಿ: ಇಂದಿನಿಂದ ಕಡಲೆಕಾಯಿ ಪರಿಷೆ ಆರಂಭ!
13 ಗಂಟೆ, 4 ಕೋಟಿ ವೀವ್ಸ್.. ರೆಕಾರ್ಡ್ಸ್ ಪೀಸ್ ಪೀಸ್
ಡೈನೋಸಾರ್ ಎಂಟ್ರಿಗೆ ಸೋಶಿಯಲ್ ಮೀಡಿಯಾ ಅಲ್ಲಾಡಿ ಹೋಗಿದೆ. ಯೂಟ್ಯೂಬ್ ಅಕ್ಷರಶಃ ತತ್ತರಿಸಿದೆ. ಟೀಸರ್ನಿಂದ ಸಿನಿಮಾ ಮೂಡಿಸಿದ್ದ ನಿರೀಕ್ಷೆಯಂತೆ DCT- ಡಾರ್ಕ್ ಸೆಂಟ್ರಿಕ್ ಥೀಮ್ನಡಿ ಪ್ರಶಾಂತ್ ನೀಲ್ ಸಲಾರ್ ಸಿನಿಮಾನ ಹೇಗೆ ಕಟ್ಟಿಕೊಟ್ಟಿದ್ದಾರೆ ಅನ್ನೋದ್ರ ಹಿಂಟ್ನ ಟ್ರೈಲರ್ ಮೂಲಕ ಕೊಟ್ಟಿದ್ದಾರೆ. ಟ್ರೈಲರ್ ಒನ್ಸ್ ಅಗೈನ್ ಕತ್ತಲು, ಹೊಡಿ ಬಡಿ ಕಡಿ ಅನ್ನೋ ಕ್ರೌರ್ಯ. ಉಗ್ರಂ ಸಿನಿಮಾನೇ ಕೆಜಿಎಫ್ ಲೆವೆಲ್ನಲ್ಲಿ ರಿಚ್ ಆಗಿ ಮಾಡಲಾಗಿದೆ ವಗೇರಾ ವಗೇರಾ ನೆಗೆಟಿವ್ ರಿವ್ಯೂವ್ಸ್ ನಡುವೆಯೂ ಕಂಟೆಂಟ್ನಿಂದ ವೀವ್ಸ್ನಲ್ಲಿ ದಾಖಲೆ ಬರೆದಿದೆ.
ಹೊಂಬಾಳೆ ಫಿಲಂಸ್ನ ಮತ್ತೊಂದು ಆ್ಯಕ್ಷನ್ ಸಾಗಾ
ಸುಮಾರು ಐದು ಭಾಷೆಯಲ್ಲಿ ರಿಲೀಸ್ ಆದ ಸಲಾರ್ ಟ್ರೈಲರ್, ಕೇವಲ 13 ಗಂಟೆಯಲ್ಲಿ ಬರೋಬ್ಬರಿ 4 ಕೋಟಿ ವೀವ್ಸ್ ಮೂಲಕ ಎಲ್ಲರ ಹುಬ್ಬೇರಿಸಿದೆ. ಅಂದಹಾಗೆ ಇದು ರಿಯಲ್ ಟೈಂ ವೀವ್ಸ್ ಅಲ್ಲ. ನಮಗೆ ಯೂಟ್ಯೂಬ್ನಲ್ಲಿ ಕಾಣಿಸೋ ವೀವ್ಸ್ ಅಷ್ಟೇ. ರಿಯಲ್ ಟೈಮ್ನಲ್ಲಿ ಇನ್ನೂ ಹೆಚ್ಚಿನ ವೀವ್ಸ್ ಆಗಿರೋದ್ರಲ್ಲಿ ಸಂಶಯವೇ ಇಲ್ಲ. ಅದ್ರಲ್ಲೂ ಹಿಂದಿ ಹಾಗೂ ತೆಲುಗು ವರ್ಷನ್ನಲ್ಲಿ ಹೆಚ್ಚಿನ ವೀಕ್ಷಕರಿಂದ ವೀಕ್ಷಿಸಲ್ಪಟ್ಟಿರೋದು ಇಂಟರೆಸ್ಟಿಂಗ್. ಈ ಮೂಲಕ ಹೊಂಬಾಳೆ ಫಿಲಂಸ್ನ ಈ ಹಿಂದಿನ ಟ್ರೈಲರ್ ರೆಕಾರ್ಡ್ಸ್ ಎಲ್ಲಾ ಉಡೀಸ್ ಆಗಿದ್ದು, ನ್ಯೂ ಟ್ರೆಂಡ್ ಸೆಟ್ ಮಾಡಿದ್ದಾರೆ ಪ್ರೊಡ್ಯೂಸರ್ ವಿಜಯ್ ಕಿರಗಂದೂರು.
ಇದನ್ನೂ ಓದಿ: ಪರಿಹಾರ ಕೇಳಿದ ರೈತನ ಮೇಲೆ ಸಂಸದ ಡಿ.ಕೆ.ಸುರೇಶ್ ಗರಂ
ಡಿಸೆಂಬರ್ 15ರಿಂದಲೇ ಆನ್ಲೈನ್ ಬುಕ್ಕಿಂಗ್ ಶುರು
ಡಿಸೆಂಬರ್ 22ಕ್ಕೆ ಸಲಾರ್ ವರ್ಲ್ಡ್ವೈಡ್ ಥಿಯೇಟರ್ ಅಂಗಳಕ್ಕೆ ಕಾಲಿಡ್ತಿದ್ದು, ಡಿಸೆಂಬರ್ 15ರಿಂದಲೇ ಆನ್ಲೈನ್ ಟಿಕೆಟ್ ಬುಕ್ಕಿಂಗ್ ಶುರುವಾಗ್ತಿದೆ. ಇದು ಮಾರ್ಕೆಟಿಂಗ್ ಸ್ಟ್ರ್ಯಾಟಜಿ ಕೂಡ ಆಗಿದ್ದು, ಪ್ರಶಾಂತ್ ನೀಲ್ ಮೇಕಿಂಗ್ ಹಾಗೂ ಪ್ರಭಾಸ್- ಪೃಥ್ವಿರಾಜ್ ಸುಕುಮಾರನ್ ನಡುವಿನ ಸ್ನೇಹದ ಗಮ್ಮತ್ತನ್ನ ಕಣ್ತುಂಬಿಕೊಳ್ಳೋಕೆ ರಿವ್ಯೂವ್ಸ್ ಕೊಟ್ಟವ್ರೆಲ್ಲಾ ಒಮ್ಮೆಯಾದ್ರೂ ಥಿಯೇಟರ್ಗೆ ಬಂದೇ ಬರಲಿದ್ದಾರೆ ಅನ್ನೋದು ಸದ್ಯದ ಲೆಕ್ಕಾಚಾರ.
ಕೆಜಿಎಫ್ ಬಳಿಕ ಹೊಂಬಾಳೆಯ ಮತ್ತೊಂದು ಆ್ಯಕ್ಷನ್ ಸಾಗಾ ಇದಾಗಲಿದ್ದು, ನೋಡುಗರಿಗೆ ಮಸ್ತ್ ಥ್ರಿಲ್ ಕೊಡಲಿದೆ ಸಲಾರ್ ಸೀಸ್ ಫೈಯರ್-1. ಮೇಕಿಂಗ್ನಲ್ಲಿ ಕೆಜಿಎಫ್ ನೆರಳು ಕಾಣಿಸಿದ್ರೂ, ಕಂಟೆಂಟ್ನಲ್ಲಿ ಉಗ್ರಂ ಗಾಳಿ ಬೀಸಿದ್ರೂ, ಪ್ರಶಾಂತ್ ನೀಲ್ಗೆ ನೋಡುಗರನ್ನ ಎಂಗೇಜ್ ಮಾಡಿಸೋ ಮ್ಯಾಜಿಕ್ ಗೊತ್ತಿದೆ. ಹಾಗಾಗಿ ಲಾಜಿಕ್ಗಳನ್ನೆಲ್ಲಾ ಪಕ್ಕಕ್ಕಿಟ್ಟು ಎಂಟರ್ಟೈನ್ಮೆಂಟ್ ವಿಚಾರದಲ್ಲಿ ಯಾವುದೇ ಕೊರತೆ ಆಗದಂತೆ ಸಲಾರ್ ಸೆಲೆಬ್ರೇಷನ್ ಜೋರಿದಲಿದೆ ಅನ್ನೋದ್ರಲ್ಲಿ ಡೌಟೇ ಇಲ್ಲ.
ಇನ್ನು, ನೋಡುಗರಿಗೆ ಇರೋ ಎಲ್ಲಾ ಸಂಶಯಗಳಿಗೆ ಡಿಸೆಂಬರ್ 22ರಂದು ಉತ್ತರ ಸಿಗಲಿದೆ. ಸಾಲು ಸಾಲು ಸಿನಿಮಾಗಳಿಂದ ಸೋತಿರೋ ಪ್ರಭಾಸ್ಗೆ ಇದು ಮಹತ್ವದ ತಿರುವು ನೀಡಲಿದ್ದು, ಬಾಕ್ಸ್ ಆಫೀಸ್ ಕಬ್ಜ ಮಾಡೋ ಮುನ್ಸೂಚನೆ ನೀಡಿದೆ. ನಮ್ಮ ಕನ್ನಡಿಗರಿಂದ ಇಂಥದ್ದೊಂದು ಪ್ರಯೋಗ ಸಾಕಾರವಾಗ್ತಿರೋದು ನಿಜಕ್ಕೂ ಖುಷಿ ಹಾಗೂ ಹೆಮ್ಮೆಯ ಸಂಗತಿ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ