Thursday, January 23, 2025

ಗ್ರಾಹಕರಿಗೆ ಶಾಕ್​: ಗ್ಯಾಸ್​ ಸಿಲಿಂಡರ್ ದರ ಹೆಚ್ಚಳ!

ಬೆಂಗಳೂರು: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಬೆನ್ನಲ್ಲೇ ವಾಣಿಜ್ಯ ಸಿಲಿಂಡರ್ ದರ ದುಬಾರಿಯಾಗಿದೆ. ತೈಲ ಕಂಪನಿಗಳು ಮತ್ತೊಮ್ಮೆ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿವೆ. ಹೀಗಾಗಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ 26 ರೂಪಾಯಿ ಏರಿಕೆಯಾಗಿದೆ.

ಇದನ್ನೂ ಓದಿ: ಶೇ.50ರಷ್ಟು ಮಹಿಳೆಯರು ಸಿಎಂ ಆಗಬೇಕು, ಇದೇ ಕಾಂಗ್ರೆಸ್ ಗುರಿ : ಮಹಿಳಾ ಅಸ್ತ್ರ ಪ್ರಯೋಗಿಸಿದ ರಾಹುಲ್ ಗಾಂಧಿ

ಡಿಸೆಂಬರ್ 1 ರಿಂದ ವಾಣಿಜ್ಯ ಸಿಲಿಂಡರ್‌ನ ಹೊಸ ದರವನ್ನು ಜಾರಿಗೆ ತರಲಾಗಿದೆ. 19 ಕೆಜಿ ಸಿಲಿಂಡರ್‌ಗೆ ಇಂದಿನಿಂದ ದೆಹಲಿಯಲ್ಲಿ 1796 ರೂಪಾಯಿ 50 ಪೈಸೆ ಪಾವತಿಸಬೇಕಾಗುತ್ತದೆ. ಅದೇ ರೀತಿ ಕೋಲ್ಕತ್ತಾದಲ್ಲಿ 1908 ರೂಪಾಯಿ, ಮುಂಬೈನಲ್ಲಿ 1749 ರೂಪಾಯಿ ಪಾವತಿಸಬೇಕಾಗುತ್ತದೆ. ಬೆಂಗಳೂರಿನಲ್ಲಿ ಈ ದರ 1883 ರೂಪಾಯಿಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಈ ಬೆಲೆ 1968 ರೂಪಾಯಿ 50 ಪೈಸೆಗೆ ಏರಿಕೆಯಾಗಿದೆ.

ಈ ಹಿಂದೆ ಇಲ್ಲಿ ಸಿಲಿಂಡರ್ 1942 ರೂ.ಗೆ ಲಭ್ಯವಿತ್ತು. ಪ್ರತಿ ತಿಂಗಳ 1 ರಂದು ತೈಲ ಕಂಪನಿಗಳು ಅಡುಗೆ ಅನಿಲದ ದರ ಪರಿಷ್ಕರಣೆ ಮಾಡುತ್ತವೆ.

RELATED ARTICLES

Related Articles

TRENDING ARTICLES