ಬೆಂಗಳೂರು: ರಿಸರ್ವ್ ಬ್ಯಾಂಕ್ ಚಲಾವಣೆಯಿಂದ ವಾಪಸ್ ಪಡೆದಿರುವ 2000 ರೂ. ಮುಖಬೆಲೆಯ ನೋಟುಗಳು ಬಹುತೇಕ ವಾಪಸ್ ಬಂದಿವೆ. ಈವೆರೆಗೆ ಶೇಕಡಾ 97.26 ರಷ್ಟು ನೋಟುಗಳು ಮರಳಿ ಕೈ ಸೇರಿವೆ ಎಂದು ರಿಸರ್ವ ಬ್ಯಾಂಕ್ ಆಫ್ ಇಂಡಿಯಾ ಹೇಳಿಕೆ ನೀಡಿದೆ.
ಈ ವರ್ಷದ ಮೇ.19ರಂದು 2000 ರೂ. ಮುಖಬೆಲೆಯ ನೋಟುಗಳನ್ನು ಆರ್ ಬಿಐ ಚಲಾವಣೆಯಿಂದ ಹಿಂದೆ ಪಡೆದಿತ್ತು. ಆದರೂ, ಈಗಲೂ ಕಾನೂನು ಬದ್ದವಾಗಿ 2000 ರೂ. ಮುಖಬೆಲೆಯ ನೋಟುಗಳನ್ನು ಬ್ಯಾಂಕ್ ಗಳಿಗೆ ವಾಪಸ್ ಕೊಡಲು ಅವಕಾಶ ನೀಡಲಾಗಿದೆ ಎಂದು ಆರ್ ಬಿಐ ಹೇಳಿದೆ.
ಇದನ್ನೂ ಓದಿ: ಗ್ರಾಹಕರಿಗೆ ಶಾಕ್: ಗ್ಯಾಸ್ ಸಿಲಿಂಡರ್ ದರ ಹೆಚ್ಚಳ!
ಬ್ಯಾಂಕ್ ಗಳ ಮೂಲಕ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ನೀಡಲಾಗಿದ್ದ ಗಡುವು ಮುಗಿದ ನಂತರವೂ ಇನ್ನೂ ದೇಶದಲ್ಲಿ ಶೇಕಡಾ 2.7 ರಷ್ಟು ನೋಟುಗಳು ಚಲಾವಣೆಯಲ್ಲಿವೆ. ಆಥವಾ ನಾಗರೀಕರ ಸಂಗ್ರಹದಲ್ಲೇ ಉಳಿದುಬಿಟ್ಟಿವೆ. ಅವನ್ನು ಪೂರ್ಣ ಪ್ರಮಾಣದಲ್ಲಿ ಹಿಂದೆ ಪಡೆಯುವ ಅಗತ್ಯವಿದೆ. ಹಾಗಾಗಿಯೇ ತಮ್ಮಲ್ಲಿರುವ 2000 ರೂ. ಮುಖಬೆಲೆಯ ನೋಟುಗಳನ್ನು ಬ್ಯಾಂಕ್ ಗಳಿಗೆ ಹಿಂದಿರುಗಿಸಲು ನಾಗರೀಕರಿಗೆ ಮತ್ತೊಂದು ಕೊನೆಯ ಅವಕಾಶ ನೀಡಲಾಗಿದೆ.
ನಿಷೇದಿತ 2000 ರೂ. ಮುಖಬೆಲೆಯ ನೋಟುಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ಅಥವಾ ಚಲಾವಣೆ ಮಾಡುವುದು ಕಾನೂನು ಪ್ರಕಾರ ಅಪರಾಧ ಎಂದು ಪರಿಗಣಿಸಲಾಗುತ್ತದೆ.