Thursday, December 19, 2024

ಪರಿಹಾರ ಕೇಳಿದ ರೈತನ ಮೇಲೆ ಸಂಸದ ಡಿ.ಕೆ.ಸುರೇಶ್ ಗರಂ

ರಾಮನಗರ: ಬರ ಪರಿಹಾರ ಕೇಳಿದ ರೈತನಿಗೆ ಸಂಸದ ಡಿಕೆ ಸುರೇಶ್ ‘ನೀನೆಷ್ಟು ಟ್ಯಾಕ್ಸ್ ಕಟ್ಟುತ್ತಿಯಾ ಹೇಳು?’ ಎಂದು ಗರಂ ಆಗಿ ಪ್ರಶ್ನಿಸಿದ ಘಟನೆ ಮಾಗಡಿಯಲ್ಲಿ ನಡೆದಿದೆ.

ಮಾಗಡಿ ತಾಲೂಕಿನ ಜನಸಂಪರ್ಕ ಸಭೆಯಲ್ಲಿ ಸಂಸದ ಮಾತನಾಡುವ ವೇಳೆ ಬರಪರಿಹಾರ ನೀಡುವಂತೆ ಕೇಳಿದ ರೈತ. ಈ ವೇಳೆ ರೈತನ ಮೇಲೆ ಸಿಟ್ಟಾದ ಸಂಸದ ಡಿ.ಕೆ.ಸುರೇಶ್, ರಾಜ್ಯ ಸರ್ಕಾರ 5 ಕೆಜಿ ಅಕ್ಕಿ ಕೊಡ್ತಿದೆ, ಇನ್ನುಳಿದ 5ಕೆಜಿಗೆ ಹಣ ಕೊಡ್ತಿದೆ. ರೈತರ ಪಂಪ್ ಸೆಟ್​ಗೆ ವಿದ್ಯುತ್ ಖರೀದಿ ಮಾಡ್ತಿದೆ. ನಾವು ದಿನಾ ಬೆಳಗಾದ್ರೆ ಜೆಡಿಎಸ್ ನವ್ರು, ಬಿಜೆಪಿ ಅವ್ರ ಕೈಯಲ್ಲಿ ಬೈಸಿಕೊಳ್ಳುತ್ತಿದ್ದೇವೆ. ನೀನಿನ್ನೂ ಅದು ಕೊಡಿ, ಇದು ಕೊಡಿ ಅಂತಿದ್ದೀಯಾ? ನೀನು‌ ಎಷ್ಟು ಟ್ಯಾಕ್ಸ್ ಕಟ್ಟುತ್ತಿದ್ದೀಯ ಹೇಳು ಎಂದು ಪ್ರಶ್ನಿಸಿದ ಸಂಸದ ಮುಂದುವರಿದು, ನೀನು ಟ್ಯಾಕ್ಸ್ ಕಟ್ಟೋದಿಲ್ಲ. ಟ್ಯಾಕ್ಸ್ ಕಟ್ಟದೇ ಇರೋರಿಗೆಲ್ಲ ಯಾಕೆ ಫ್ರೀ ಕೊಡುತ್ತೀಯಾ ಅಂತಾ ಮೋದಿ ಕೇಳ್ತಿದ್ದಾರೆ. ಮೋದಿ ಯಾರ ಹತ್ತಿರನೂ ಮಾತನಾಡಲ್ಲ‌, ಅವನು ಹೇಳಿದನ್ನ ನೀನು ಕೇಳಿಕೊಳ್ಳಬೇಕು. ನೀನು ಮೋದಿ‌ನೇ ಸರಿ ಅಂದರೆ ನಾನು‌ ಏನು‌ ಮಾಡೋಕಾಗುತ್ತೆ ಎಂದರು.

ಇದನ್ನೂ ಓದಿ: ವಿಶ್ವಕಪ್ ಟ್ರೋಫಿ ಮೇಲೆ ಮತ್ತೊಮ್ಮೆ ಕಾಲಿಡಲು ಸಿದ್ಧ: ಮಾರ್ಷ್​

ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡು ಬೇಡಿಕೆಯನ್ನು ಇಡಬೇಕು. ಎಲ್ಲರಿಗೂ ಆಸೆ ಇದೆ, ಏನು ಕೊಟ್ಟರೂ ಸಾಲೋದಿಲ್ಲ. ಸರ್ಕಾರಿ ನೌಕರರಿಗೂ ಸಮಾಧಾನ ಇಲ್ಲ. ಪಂಚಾಯತ್ ಸದಸ್ಯರು, ಶಾಸಕರು ಸಾಮಾಧಾನವಾಗಿಲ್ಲ. ಬೆಳಗ್ಗೆ ಎದ್ದು ಯಾರು ದುಡಿಮೆ ಮಾಡುತ್ತಾನೋ ಅವನೇ ಸಮಾಧಾನವಾಗಿರೋದು.ಇವತ್ತಿನ‌ ಪರಿಸ್ಥಿತಿ ಬೇರೆ ದಿಕ್ಕಿನಲ್ಲಿ ಸಾಗುತ್ತಿದೆ. ನೀನು ನೆಮ್ಮದಿಯಾಗಿಲ್ಲ, ನಿನಗೆ ದಿನವೂ ಆಸೆ ಜಾಸ್ತಿ ಆಗ್ತಿದೆ ಎಂದು ಜನಸಂಪರ್ಕ ಸಭೆಯಲ್ಲಿ ಬರಪರಿಹಾರ ಕೇಳಿದ ರೈತನಿಗೆ ಸಂಸದ ಡಿಕೆ ಸುರೇಶ್ ವಿವರಿಸಿದರು.

RELATED ARTICLES

Related Articles

TRENDING ARTICLES