ಬೆಂಗಳೂರು: ಇಂದಿನಿಂದ ಡಿಸೆಂಬರ್ 4ರವರಗೆ ಕಾಡುಮಲ್ಲೇಶ್ವರ ದೇವಾಲಯದಲ್ಲಿ ಕಡಲೆಕಾಯಿ ಪರಿಷೆ ನಡೆಯಲಿದೆ.
ಮಲ್ಲೇಶ್ವಂ 15ನೇ ಕ್ರಾಸ್ ನಲ್ಲಿರುವ ಕಾಡುಮಲ್ಲೇಶ್ವರ ದೇವಾಲಯದಲ್ಲಿ ನಡೆಯುತ್ತಿರುವ ಏಳನೇ ವರ್ಷದ ಕಡಲೆಕಾಯಿ ಪರಿಷೆ ಇದಾಗಿದ್ದು, ಬೆಳಿಗ್ಗೆ 9-30ಕ್ಕೆ ಕಾಡುಮಲ್ಲಿಕಾರ್ಜುನ ಸ್ವಾಮಿಗೆ ಕಡಲೆಕಾಯಿ ಅಭಿಷೇಕ ಕೂಡ ನಡೆದಿದೆ. ಈ ಬಾರಿ ವಿಶೇಷವಾಗಿ 800 ಕೆಜಿ ಕಡಲೆಕಾಯಿಗಳಿಂದ ನಂದಿ ವಿಗ್ರಹ ಶೃಂಗಾರಗೊಂಡಿದೆ. ಈ ನಂದಿ ವಿಗ್ರಹ 20 ಅಡಿ ಎತ್ತರ 20 ಅಡಿ ಉದ್ದವಿದೆ.
ಇದನ್ನೂ ಓದಿ: ಪರಿಹಾರ ಕೇಳಿದ ರೈತನ ಮೇಲೆ ಸಂಸದ ಡಿ.ಕೆ.ಸುರೇಶ್ ಗರಂ
ಇಂದು ಬೆಳಿಗ್ಗೆ 11 ಗಂಟೆಗೆ ಡಿಸಿಎಂ ಡಿ.ಕೆ. ಶಿವಕುಮಾರ್, ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿರವರಿಂದ ಉದ್ಘಾಟನೆ ಕಾರ್ಯ ನಡೆಯಲಿದೆ. ಪರಿಷೆಯಲ್ಲಿ ತಮಿಳುನಾಡು, ಆಂಧ್ರ, ತೆಲಂಗಾಣ ಸೇರಿದಂತೆ ಕರ್ನಾಟಕದಿಂದ ನೂರಾರು ರೈತರು ಕಡಲೆಕಾಯಿ ಪರಿಷೆಯಲ್ಲಿ ಭಾಗಿಯಾಗಲಿದ್ದಾರೆ. ಪರಿಷೆಯಲ್ಲಿ ಅಂದಾಜು 8 ಲಕ್ಷ ಜನರು ಭಾಗಿಯಾಗುವ ಸಾಧ್ಯತೆ ಇದೆ.