ಬೆಂಗಳೂರು: ಕಳೆದ ನವೆಂಬರ್ ತಿಂಗಳಲ್ಲಿ ಜಿಎಸ್ಟಿ ಸಂಗ್ರಹದಲ್ಲಿ ಮಹಾರಾಷ್ಟ್ರವು ಎಂದಿನಂತೆ ಮೊದಲ ಸ್ಥಾನದಲ್ಲಿದ್ದರೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಗುಜರಾತ್, ತಮಿಳುನಾಡು, ಹರಿಯಾಣ, ಉತ್ತರ ಪ್ರದೇಶ ರಾಜ್ಯಗಳಿಗಿಂತಲೂ ಹೆಚ್ಚಿನ ತೆರಿಗೆಯನ್ನು ಕರ್ನಾಟಕ ಈ ಮಾಸದಲ್ಲಿ ಸಂಗ್ರಹಿಸಿದೆ.
ಮಹಾರಾಷ್ಟ್ರ ರಾಜ್ಯವು 25,585 ಕೋಟಿ ರೂಪಾಯಿ ಜಿಎಸ್ಟಿ ಸಂಗ್ರಹದೊಂದಿಗೆ ಮುಂಚೂಣಿ ಸ್ಥಾನದಲ್ಲಿ ಮುಂದುವರಿದಿದೆ. 11,970 ಕೋಟಿ ರೂಪಾಯಿ ಜಿಎಸ್ಟಿ ಸಂಗ್ರಹಿಸುವ ಮೂಲಕ ಕರ್ನಾಟಕವು ಎರಡನೇ ಸ್ಥಾನದಲ್ಲಿ ಮತ್ತೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಈ ಮೊದಲು ಕೂಡ ರಾಜ್ಯವು ಮಾಸಿಕ ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿತ್ತು.
ಇದನ್ನೂ ಓದಿ: 2 ಸಾವಿರ ಮುಖಬೆಲೆಯ ನೋಟ್ ಇಟ್ಟುಕೊಂಡುವರಿಗೆ ಶಾಕ್ ನೀಡಿದ RBI
2022ರ ನವೆಂಬರ್ನಲ್ಲಿ 10,238 ಕೋಟಿ ರೂಪಾಯಿಗಳನ್ನು ಕರ್ನಾಟಕ ಸಂಗ್ರಹಿಸಿತ್ತು. ಪ್ರಮುಖ ರಾಜ್ಯಗಳ ಪೈಕಿ ಗುಜರಾತ್ 10,853 ಕೋಟಿ ರೂಪಾಯಿ, ತಮಿಳುನಾಡು 10,255 ಕೋಟಿ ರೂಪಾಯಿ, ಹರಿಯಾಣ 9,732 ಕೋಟಿ ರೂಪಾಯಿ, ಉತ್ತರ ಪ್ರದೇಶ 8,973 ಕೋಟಿ ರೂಪಾಯಿ ಜಿಎಸ್ಟಿ ಸಂಗ್ರಹಿಸಿವೆ.