Sunday, December 22, 2024

ಬಿಜೆಪಿಯವರು ಜನಸಂಘದವರನ್ನು ಕಡೆಗಣಿಸಿದ್ದಾರೆ : ಜಗದೀಶ್ ಶೆಟ್ಟರ್

ವಿಜಯಪುರ : ಜನಸಂಘದಿಂದ ಬಂದಂತವರಿಗೆ ಒಂದು ಟಿಕೆಟ್ ಕೊಡಲಿಲ್ಲ ಬಿಜೆಪಿಯವರು. ಇದನ್ನು ಈಶ್ವರಪ್ಪನವರಿಗೆ ಪ್ರಶ್ನೆ ಮಾಡಿ. ಬಿಜೆಪಿಯವರು ಯಾವ ರೀತಿ ಜನಸಂಘದವರನ್ನು ಕಡೆಗಣಿಸಿದ್ದಾರೆ ನಿವೇ ನೋಡಿ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕುಟುಕಿದರು.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುತ್ವಕ್ಕೆ ರಾಜಕಾರಣ ಯಾಕೆ ಬೆರೆಸುತ್ತಿದ್ದಾರೆ ಗೊತ್ತಿಲ್ಲ. ನನ್ನನ್ನು ಹಾಗೂ ಜನಸಂಘದಿಂದ ಬಂದವರಿಗೆ ಕಾಂಗ್ರೆಸ್​ಗೆ ಹೋಗುವಂತೆ ಮಾಡಿದ್ದು ಯಾರು? ಮೊದಲು ಅವರು ಆತ್ಮಾವಲೋಕನ ಮಾಡಿಕೊಳ್ಳಲಿ. ನನಗೆ ಯಾವ ರೀತಿ ನಡೆಸಿಕೊಂಡು ಹೊರಗೆ ಹಾಕುವಂತಹ ಪ್ರಯತ್ನ ಮಾಡಿದ್ದರಲ್ಲ, ಇದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದರು.

ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ಹೋಗುತ್ತಾರೆ ಎಂಬ ಸುದ್ದಿಯನ್ನು ಹಬ್ಬಿಸಿದ್ದಾರೆ. ಇದು ಹಸಿ ಸುಳ್ಳು. ಇಂದು ಸಾಕಷ್ಟು ಜನ ಬಿಜೆಪಿಯಿಂದ ಕಾಂಗ್ರೆಸ್ ‌ಪಕ್ಷಕ್ಕೆ ಸೇರಿಕೊಳ್ಳುತ್ತಿದ್ದಾರೆ. ಜೊತೆಗೆ ನನ್ನ ಮೂಲಕ ಕೂಡ ಸಂಪರ್ಕ ಮಾಡಿ ಕಾಂಗ್ರೆಸ್​ ಸೇರಲು ಮುಂದೆ ಬರುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಈ ಸುಳ್ಳು ಸುದ್ದಿ ಹಬ್ಬಿಸಿ, ಜಗದೀಶ್ ಶೆಟ್ಟರ್ ಅವರೇ ಮರಳಿ ಬರುತ್ತಾರೆ ಅಂತಾ ಹಬ್ಬಿಸಿದ್ದಾರೆ. ಅಲ್ಲಿರುವ ಜನರನ್ನು ಉಳಿಸಿಕೊಳ್ಳಲು ಪ್ರಯತ್ನ ನಡೆದಿದೆ ಅಷ್ಟೇ ಎಂದು ಚಾಟಿ ಬೀಸಿದರು.

ಈ ಸುದ್ದಿ ಓದಿದ್ದೀರಾ? : ಅಂದು ನಮ್ಮ ತಂದೆಯ ಕಣ್ಣಲ್ಲಿ ಆನಂದ ಭಾಷ್ಪ ನೋಡಿದೆ : ಬಿ.ವೈ. ವಿಜಯೇಂದ್ರ

ಬಿಜೆಪಿಯವ್ರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ

ನನಗಂತೂ ಬಿಜೆಪಿಯಿಂದ ಯಾರೂ ಆಹ್ವಾನ ಕೊಟ್ಟಿಲ್ಲ, ಆಹ್ವಾನ ಕೊಡುವ ಪ್ರಶ್ನೆಯೇ ಬರುವುದಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ನನಗೆ ಹಾಗೂ ಲಕ್ಷಣ ಸವದಿ ಅವರಿಗೆ ಟಿಕೆಟ್ ತಪ್ಪಿಸಿದ್ದ ಪರಿಣಾಮ ಚುನಾವಣೆಯಲ್ಲಿ ಕರ್ನಾಟಕದ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮತ್ತೆ ಹಿನ್ನಡೆಯಾಗಬಾರದು ಅಂತ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಜಗದೀಶ್ ಶೆಟ್ಟರ್ ಛೇಡಿಸಿದರು.

RELATED ARTICLES

Related Articles

TRENDING ARTICLES