Wednesday, January 22, 2025

ಪ್ರೀತಿ ಹೆಸರಲ್ಲಿ ಯುವತಿಯರಿಗೆ ವಂಚನೆ : ಹೊಸ ಪ್ರೇಯಸಿಗಾಗಿ ಹಳೇ ಲವರ್ ಗೆ ಚಿತ್ರಹಿಂಸೆ, ವಿಕೃತ ಪ್ರೇಮಿ ಅಂದರ್

ಹಾಸನ: ಸೋಷಿಯಲ್ ಮೀಡಿಯಾದಲ್ಲಿ ಕಾಣೋ ಹುಡುಗಿಯರ ಜೊತೆ ಪ್ರೀತಿಸುವ ನಾಟಕ ಮಾಡಿ ಯುವತಿಯರಿಗೆ ವಂಚಿಸುವುದನ್ನೇ ಕಾಯಕ ಮಾಡಿಕೊಂಡಿದ್ದ ಪ್ರೇಮಿಯನ್ನ ಸಕಲೇಶಪುರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಮೂಲತಃ ಸಕಲೇಶಪುರ ಪಟ್ಟಣದ ಕುಶಾಲನಗರ ಬಡಾವಣೆಯ ನಿವಾಸಿಯಾದ ಶರತ್‌, ಸೋಷಿಯಲ್ ಮೀಡಿಯಾದಲ್ಲಿ ಕಾಣುವ ಸುಂದರ ಯುವತಿಯರನ್ನೇ ಟಾರ್ಗೆಟ್ ಮಾಡುತ್ತಿದ್ದ. ಮೊದಲಿಗೆ ಪರಿಚಯವಾಗಿ ಯುವತಿಯರ ನಂಬರ್ ಪಡೆದು ಬಳಿಕ ಪ್ರೀತಿಯ ನಾಟಕ ಮಾಡಿ ಯುವತಿಯರನ್ನು ಬಲೆಗೆ ಕೆಡುವುತ್ತಿದ್ದ ಆರೋಪಿ.

ಇದನ್ನೂ ಓದಿ: ಬೆಂಗಳೂರಿನ 15 ಶಾಲೆಗಳಿಗೆ ಬಾಂಬ್ ಬೆದರಿಕೆ : ಶಾಲೆಗಳಿಗೆ ಓಡೋಡಿ ಬಂದ ಪೋಷಕರು 

ಓರ್ವ ಯುವತಿಯನ್ನ ಪ್ರೀತಿಸೋದಾಗಿ ನಂಬಿಸಿ ಮತ್ತೊಬ್ಬಳಿಗೆ ಅಮಾನುಷವಾಗಿ ಹಲ್ಲೆಮಾಡಿ ಸಿಕ್ಕಿಬಿದ್ದಿರುವ ಪಾಪಿ. ತನ್ನ ಪ್ರೀತಿ ಸಾಬೀತು ಮಾಡಲು ಮತ್ತೊಬ್ಬ ಪ್ರೇಯಸಿಗೆ ವೀಡಿಯೋ ಕಾಲ್ ಮಾಡಿ ಹಳೇ ಲವರ್ ಗೆ ಮಾರಣಾಂತಿಕ ಹಲ್ಲೆ ನಡೆಸಿದ್ದ ವಿಕೃತ ಪ್ರೇಮಿ. ಪ್ರೀತಿಯ ನಾಟಕವಾಡಿ ತನ್ನ ಮನೆಗೆ ಕರೆದೊಯ್ದು ಯುವತಿಗೆ ಚಿತ್ರಹಿಂಸೆ ನೀಡಿದ್ದ ಸೈಕೋಪಾತ್. ಹಾಸನ ಜಿಲ್ಲೆ ಬೇಲೂರು ತಾಲೂಕಿನ ಗರ್ಜೆ ಗ್ರಾಮದಲ್ಲಿ ನಡೆದಿದ್ದ ಘಟನೆ.

ಇಬ್ಬರು ಯುವತಿಯರಿಗೆ ಲವ್ ಸೆಕ್ಸ್ ದೋಖಾ:

ಪ್ರೀತಿಯ ನಾಟಕ ಮಾಡಿ ಯುವತಿಯರಿಗೆ ಗಾಳ ಹಾಕುತ್ತಿದ್ದ ಆರೋಪಿ, ಇದೇ ರೀತಿ ಸಕಲೇಶಪುರದ ಇಬ್ಬರು ಯುವತಿಯರಯನ್ನು ಬಲೆಗೆ ಹಾಕಿ ಪ್ರೀತಿಯ ನೆಪದಲ್ಲಿ ಲವ್ ಸೆಕ್ಸ್ ವಂಚನೆ ಮಾಡಿದ್ದ. ಅಲ್ಲದೆ ಇನ್ನೊಬ್ಬಳಿಗೆ ತನ್ನ ಪ್ರೀತಿ ಸಾಬೀತು ಮಾಡಲು ಮತ್ತೊಬ್ಬಳಿಗೆ ಚಿತ್ರ ಹಿಂಸೆ ನೀಡಿದ್ದ ಆರೋಪಿ. ದೌರ್ಜನ್ಯಕ್ಕೆ ಒಳಗಾಗಿದ್ದ ಯುವತಿಯಿಂದ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಬಯಲಾಯಿತು ವಂಚಕನ ಕರ್ಮಕಾಂಡ.

ಮೂರು ವರ್ಷದಿಂದ ಲೈಂಗಿಕ ದೌರ್ಜನ್ಯ 

ಪ್ರೀತಿ ನೆಪದಲ್ಲಿ ಯುವತಿಯೊಂದಿಗೆ ಕಳೆದ ಮೂರು ವರ್ಷಗಳಿಂದ ಲೈಂಗಿಕ ದೌರ್ಜನ್ಯ ನಡೆಸಿದ್ದ ಆರೋಪಿ ಶರತ್. ತನ್ನ ಪ್ರೀತಿಯ ಬಲೆಗೆ ಬಿದ್ದ ಬಳಿಕ ಯುವತಿಯಿಂದ ಹಣ, ಒಡವೆ ಪಡೆದು ವಂಚಿಸಿದ್ದ ಆರೋಪಿ. ಓರ್ವ ಯುವತಿಯನ್ನ ಪ್ರೀತಿಸುವಾಗಲೇ ಮತ್ತೊರ್ವಳಿಗೆ ಗಾಳ ಹಾಕುತ್ತಿದ್ದ ಖತರ್ನಾಕ್.

ವಂಚಕನ ಮೋಸದ ಬಗ್ಗೆ ಅನುಮಾನಗೊಂಡ ಯುವತಿ ಪ್ರಶ್ನೆ ಮಾಡಿದಾಗ ಅವಳನ್ನು ನಂಬಿಸಲು ಮತ್ತೋರ್ವ ಳ ಮೇಲೆ ಹಲ್ಲೆ. ಹಲ್ಲೆ ಮಾಡುವಾಗ ವಿಡಿಯೋ ಕಾಲ್ ಮಾಡಿ ನಂಬಿಸಲು ಮುಂದಾಗಿದ್ದ ಅರೋಪಿ. ತನ್ನದೇ ಮನೆಯಲ್ಲಿ ಯುವತಿಯನ್ನ ನೇಣು ಬಿಗಿಯೋ ಯತ್ನ ಮಾಡಿದ್ದ ನೀಚ. ಯುವತಿ ಮೇಲೆ‌ ಹಲ್ಲೆ ಮಾಡಿದ ವೀಡಿಯೋ ಆಧರಿಸಿ ಠಾಣೆಗೆ ದೂರು ನೀಡಿ ವಂಚಕನ ಮುಖವಾಡ ಬಿಚ್ಚಿಟ್ಟ ಯುವತಿಯರು. ನವಂಬರ್ 29 ರಂದು ಶರತ್ ಬಂಧಿಸಿರೋ ಸಕಲೇಶಪುರ ಗ್ರಾಮಾಂತರ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. ಇನ್ನೆಷ್ಟು ಯುವತಿಯರಿಗೆ ವಂಚನೆ ಮಾಡಿದ್ದಾನೋ ಪಾಪಿ ಪೊಲೀಸರ ತನಿಖೆ ಬಳಿಕವೇ ಗೊತ್ತಾಗಲಿದೆ.

RELATED ARTICLES

Related Articles

TRENDING ARTICLES