Thursday, December 26, 2024

ನನ್ನ ಕ್ಷೇತ್ರದಲ್ಲೇ 224 ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲ: ಹೆಚ್.ಡಿ‌.ರೇವಣ್ಣ

ಹಾಸನ: ನನ್ನ ಕ್ಷೇತ್ರವೊಂದರಲ್ಲೇ 224 ಶಾಲೆಗಳಲ್ಲಿ ಶೌಚಾಲಯ ಇಲ್ಲ. ಇರುವ ಕಡೆ ಶಿಕ್ಷಕರೇ ಸ್ವಚ್ಛ ಮಾಡುವ ಪರಿಸ್ಥಿತಿ ಬಂದಿದೆ ಎಂದು ಮಾಜಿ ಸಚಿವ ಹೆಚ್.ಡಿ‌.ರೇವಣ್ಣ ಬೇಸರ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಸಚಿವರು ಬಂದರು. ಕಾಂಗ್ರೆಸ್ ಕಚೇರಿಗೆ ಭೇಟಿ ಕೊಟ್ಟರು. ಜಿಪಂನಲ್ಲಿ ಕೇಸರಿಬಾತ್, ಉಪ್ಪಿಟ್ಟು ತಿಂದು ಹೋದರು. ಶೌಚಾಲಯ ತೊಳೆಯುವ ಶಿಕ್ಷಕರ ಸ್ಥಿತಿ ಏನಾಗಬೇಕು. ಇಂಥ ಪರಿಸ್ಥಿತಿ ನಾಚಿಕೆಗೇಡು ಎಂದು ಅಸಮಾಧಾನ ಹೊರಹಾಕಿದರು.

ಬಿಜೆಪಿ-ಜೆಡಿಎಸ್ ಮೈತ್ರಿಗೆ ವಿರೋಧ ವ್ಯಕ್ತಪಡಿಸಿರುವ ಸಚಿವ ಮಧು ಬಂಗಾರಪ್ಪ ಹೇಳಿಕೆಗೆ ಟಾಂಗ್ ನೀಡಿದ ರೇವಣ್ಣ, ಅವರು ಕುಮಾರಣ್ಣನ ಬಳಿ ವ್ಯಾಪಾರ ಮಾಡಿಕೊಂಡು ಹೋಗಿರುವವರು. ಅವರ ಪಕ್ಷದವರೇಕೆ 2009 ರಲ್ಲಿ ನಮ್ಮ ಬಳಿ ಬಂದಿದ್ದರು ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

ಇದನ್ನೂ ಓದಿ: ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ನೇತೃತ್ವದಲ್ಲಿ ಸವಿಗನ್ನಡ ಸಂಭ್ರಮ 2023

ರಾಜ್ಯದ ದುಡ್ಡಿನಿಂದ ತೆಲಂಗಾಣದಲ್ಲಿ ಚುನಾವಣೆ ಮಾಡಲಾಗುತ್ತಿದೆ. ಗೃಹಲಕ್ಷ್ಮಿ ಆಸೆ ತೋರಿಸಿ ರಾಜ್ಯ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.

RELATED ARTICLES

Related Articles

TRENDING ARTICLES