ನವದೆಹಲಿ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚುನಾವಣಾ ರಾಜಕೀಯದಲ್ಲಿ 50 ವರ್ಷಗಳನ್ನು ಪೂರೈಸಿದ್ದು, ಅದರ ಗೌರವಾರ್ಥ ಕಾಂಗ್ರೆಸ್ ಪುಸ್ತಕ ಪ್ರಕಟಿಸಿದೆ.
ದೆಹಲಿಯ ಜವಾಹರ್ ಭವನದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು, ‘ಮಲ್ಲಕಾರ್ಜುನ್ ಖರ್ಗೆ : ಪೊಲಿಟಿಕಲ್ ಎಂಗೇಜ್ಮೆಂಟ್ ವಿತ್ ಕಾಂಪೇಷನ್, ಜಸ್ಟೀಸ್ ಆ್ಯಂಡ್ ಇನ್ಕ್ಲೂಸಿವ್ ಡೆವೆಲಪ್ಮೆಂಟ್’ ಎಂಬ ವಿಶೇಷ ಅಭಿನಂದನಾ ಸಂಪುಟವನ್ನು ಬಿಡುಗಡೆ ಮಾಡಿದ್ದಾರೆ.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಸೋನಿಯಾ ಗಾಂಧಿ, ರಾಜಕೀಯದಲ್ಲಿ 50 ವರ್ಷಗಳು ಸುದೀರ್ಘ ಅವಧಿ. ಮಲ್ಲಿಕಾರ್ಜುನ ಖರ್ಗೆ ಅವರು ಅದರ ಅನಿರೀಕ್ಷಿತ ಹಾದಿಯಲ್ಲಿ ಸಾಗಿ ತಮ್ಮ ರಾಜಕೀಯ ವೃತ್ತಿಜೀವನದುದ್ದಕ್ಕೂ ಎತ್ತರಕ್ಕೆ ಏರುತ್ತಲೇ ಇದ್ದರು ಎಂದು ಹೇಳಿದ್ದಾರೆ.
ಖರ್ಗೆ ಕೊಂಡಾಡಿದ ಸೋನಿಯಾ
ಖರ್ಗೆ ಅವರು ಒಮ್ಮೆಯೂ ತಮ್ಮ ಸಿದ್ಧಾಂತದಲ್ಲಿ ರಾಜಿ ಮಾಡಿಕೊಳ್ಳಲಿಲ್ಲ. ಒಮ್ಮೆಯೂ ಅವರು ಬಡವರ ವಿಚಾರದಿಂದ ದೂರ ಸರಿಯಲಿಲ್ಲ ಮತ್ತು ರಾಜಕೀಯ ಯುದ್ಧದಲ್ಲಿ ಗೆಲ್ಲಲು ಅವರು ಒಮ್ಮೆಯೂ ಘನತೆ ಮತ್ತು ನಡವಳಿಕೆಯಲ್ಲಿ ರಾಜಿ ಮಾಡಿಕೊಂಡಿಲ್ಲ. ಅದಕ್ಕಾಗಿಯೇ ಅವರು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (AICC) ಅಧ್ಯಕ್ಷರಾಗಿದ್ದಾರೆ ಎಂದು ತಿಳಿಸಿದ್ದಾರೆ.
CPP Chairperson Smt. Sonia Gandhi ji launches a felicitation volume honouring Congress President Shri @kharge‘s 50 years in electoral politics.
Eminent guests, including authors and leaders of various political parties, also graced the event.
📍Jawahar Bhawan, New Delhi pic.twitter.com/iHPNkqe1vx
— Congress (@INCIndia) November 29, 2023