Wednesday, January 22, 2025

ಮಹಿಳಾ ಪ್ರಯಾಣಿಕರಿಂದ ಉಚಿತ ಬಸ್​ ಸೇವೆ ದುರುಪಯೋಗ: ಕಂಡೆಕ್ಟರ್​ಗಳಿಗೆ ತಲೆಬಿಸಿ!

ಬೆಂಗಳೂರು: ಶಕ್ತಿಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್​ ಸೇವೆಯನ್ನು ಮಹಿಳೆಯರು ದುರುಪಯೋಗ ಪಡಿಸಿಕೊಳ್ಳುತ್ತಿರು ಆರೋಪಗಳು ಕೇಳಿ ಬರುತ್ತಿದೆ.

ಕಾಂಗ್ರೆಸ್​ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಕೆಎಸ್​ಆರ್​ಟಿಸಿ ಮತ್ತು ಬಿಎಂಟಿಸಿ ಬಸ್​ಗಳಲ್ಲಿ ರಾಜ್ಯಾದ್ಯಂತ ಉಚಿತ ಸಾರಿಗೆ ಸೇವೆಯನ್ನು ಮಹಿಳಾ ಪ್ರಯಾಣಿಕರು ದುರುಪಯೋಗಪಡಿಸಿಕೊಳ್ಳುತ್ತಿದ್ದು ಕಂಡೆಕ್ಟರ್ ಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಇದನ್ನೂ ಓದಿ: 41 ಕಾರ್ಮಿಕರ ರಕ್ಷಣೆಗೆ ನಡೆದ ಅವಿರತ ಪ್ರಯತ್ನ: ಸಿಎಂ ಸಿದ್ದರಾಮಯ್ಯ ಪ್ರಶಂಸೆ!

ಉಚಿತ ಬಸ್​ ಸೇವೆಯ ಟಿಕೆಟ್ ಪಡೆಯುವಾಗ ಮಹಿಳಾ ಪ್ರಯಾಣಿಕರು ತಮ್ಮ ಆಧಾರ್​ ಕಾರ್ಡ್​ ಅಥವ ಇತರೇ ಗುರುತಿನ ಚೀಟಿಗಳನ್ನು ತೋರಿಸಿ ತಮಗೆ ಬೇಕಾದ ಸ್ಟಾಪ್​ ಗಳಿಗೆ ಟಿಕೆಟ್​ ಪಡೆಯುತ್ತಾರೆ. ಬಳಿಕ, ಮಾರ್ಗ ಮಧ್ಯದಲ್ಲೇ ಇಳಿದು ಹೋಗುತ್ತಿದ್ದಾರೆ, ಇಂಥ ಸಂದರ್ಭದಲ್ಲಿ ಟಿಕೆಟ್​ ಚೆಕಿಂಗ್ ಅಧಿಕಾರಿಗಳು ಬಂದಾಗ ಮಹಿಳಾ ಪ್ರಯಾಣಿಕರಿಗೆ ನೀಡಿದ ಟಿಕೆಟ್​ ನ ಲೆಕ್ಕದಲ್ಲಿ ವ್ಯತ್ಯಾಸಗಳು ಕಂಡುಬರುತ್ತಿದ್ದು, ಕಂಡೆಕ್ಟರ್​ಗಳು ತಮಗೆ ಇಷ್ಟಬಂದಂತೆ ಟಿಕೆಟ್​ ಗಳ  ಹರಿಯುತ್ತಿದ್ದಾರೆ ಇದರಿಂದ ಸರ್ಕಾರಕ್ಕೆ ನಷ್ಟವನ್ನು ಉಂಟುಮಾಡುತ್ತಿದ್ದಾರೆ ಎನ್ನುವ ಆರೋಪಗಳು ಕಂಡೆಕ್ಟರ್​ಗಳ ಹೊತ್ತುಗಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಆದ್ದರಿಂದ ಸರ್ಕಾರ ಈ ಕುರಿತು ಕ್ರಮ ಕೈಗೊಳ್ಳಬೇಕು ಎನ್ನುವ ಕೂಗು ಕಂಡೆಕ್ಟರ್​ಗಳಿಂದ ಕೇಳಿಬರುತ್ತಿದೆ.

RELATED ARTICLES

Related Articles

TRENDING ARTICLES