ಬೆಂಗಳೂರು : ನನಗೆ ಕೊಡಬಾರದ ನೋವು ಕೊಟ್ಟಿದ್ದಾರೆ. ಈಗಲ್ಟನ್ ರೆಸಾರ್ಟ್ನಲ್ಲಿ ನಾನು ಪಕ್ಷದ ಕೆಲಸವೇ ಮಾಡಿದ್ದು, ರೇಡ್ ಮಾಡಿ ಕೊಡಬಾರದ ಹಿಂಸೆ ಕೊಟ್ರು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 370 ಜನ ಸಿಆರ್ಪಿಎಫ್ ಪೊಲೀಸರನ್ನ ಕರೆದುಕೊಂಡು ಬಂದಿದ್ರು. ಈಗಲ್ಟನ್ ನಲ್ಲಿ ನನ್ನ ಮೇಲೆ, ನಮ್ಮವರ ಮೇಲೆ ರೇಡ್ ಮಾಡಿದ್ರು. ನನಗೆ ಕೋರ್ಟ್ ಮೇಲೆ ನಂಬಿಕೆ ಇದೆ ಎಂದು ತಿಳಿಸಿದ್ದಾರೆ.
ನನಗೆ ಏನು ಗೊತ್ತಿಲ್ಲ, ನಾನೀಗ ಸಮ್ಮಿಟ್ ಅಲ್ಲಿ ಇದ್ದೀನಿ. ಕರ್ನಾಟಕ ಸಮೃದ್ಧ ಮಾಡುವ ಸಲುವಾಗಿ ನಾವೆಲ್ಲರೂ ಪ್ರಯತ್ನ ಪಡುತಿದ್ದೇವೆ. ಸಾವಿರಾರು ಜನ ದೇಶ-ವಿದೇಶದಿಂದ ಇಲ್ಲಿಗೆ ಬಂದಿದ್ದಾರೆ. ನ್ಯಾಯಾಲಯದಲ್ಲಿ ಏನಾಗಿದೆ ಅಂತ ಗೊತ್ತಿಲ್ಲ. ಸೋ ನಾನು ಮಾತನಾಡಲ್ಲ. ಯಲ್ಲರ ಮಾತನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ, ಸಮಯ ಬಂದಾಗ ಉತ್ತರ ಕೊಡುತ್ತೇನೆ ಎಂದು ಹೇಳಿದ್ದಾರೆ.
ಎಲ್ಲವೂ ಪಾರ್ಟಿಗಾಗಿ ಮಾಡಿದ್ದೇನೆ
ನಾನು ಪಾರ್ಟಿಗಾಗಿ ದುಡಿದಿದ್ದೇನೆ, ಅದಕ್ಕೆ ಇಷ್ಟೆಲ್ಲಾ ಕಷ್ಟ ಅನುಭವಿಸಿದ್ದೇನೆ. ನನ್ನ ಪರವಾಗಿ ನಿಂತ ಎಲ್ಲರಿಗೂ ಕೋಟಿ ವಂದನೆಗಳು. ನನ್ನ ವಕೀಲರ ಬಳಿ ಚರ್ಚಿಸಿ ನಂತರ ಮಾತನಾಡುತ್ತೇನೆ. ನಾನೇನು ತಪ್ಪು ಮಾಡಿಲ್ಲ, ಎಲ್ಲವೂ ಪಾರ್ಟಿಗಾಗಿ ಮಾಡಿದ್ದೇನೆ. ಪಾರ್ಟಿಗೆ ದುಡಿದಿದ್ದಕ್ಕೆ ನನಗೆ ಇಷ್ಟೆಲ್ಲ ಎಂದು ಡಿ.ಕೆ. ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.