ಉತ್ತರಕಾಶಿಯ ಸುರಂಗದ ಒಳಗಡೆ ಇದ್ದ ಕಾರ್ಮಿಕರು ಸುರಕ್ಷಿತವಾಗಿ ಹೊರಬರಲಿ ಎಂಬ ದೇಶದ ಜನರ ಪ್ರಾರ್ಥನೆ ಫಲ ನೀಡಿದೆ. ಉತ್ತರಾಖಂಡದ ಉತ್ತರಕಾಶಿ ಸುರಂಗದಲ್ಲಿ 17 ದಿನಗಳಿಂದ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.
17 ದಿನ 400 ಗಂಟೆಗಳ ಆಪರೇಷನ್ ಯಶಸ್ವಿಯಾಗಿದ್ದು ಒಬ್ಬೊಬ್ಬರನ್ನೇ ಸುರಕ್ಷಿತವಾಗಿ ಹೊರತರಲಾಗಿದೆ. ಬಳಿಕ ಆರೋಗ್ಯ ತಪಾಸಣೆ ನಡೆಸಿ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಸುರಂಗದ ಒಂದು ಭಾಗವು ನವೆಂಬರ್ 12 ರಂದು ಕುಸಿದಿತ್ತು. ಸುರಂಗದ ಸಿಲ್ಕ್ಯಾರಾ ಭಾಗದಲ್ಲಿ 60 ಮೀಟರ್ ವಿಸ್ತಾರದಲ್ಲಿ ಅವಶೇಷಗಳು ಬೀಳುತ್ತಿತ್ತು. ಇದರಿಂದಾಗಿ 41 ಕಾರ್ಮಿಕರು ನಿರ್ಮಾಣ ಹಂತದಲ್ಲಿರುವ ಸುರಂಗದೊಳಗೆ ಸಿಲುಕಿದ್ದರು.
ಸುರಂಗದಲ್ಲಿ ಸಿಲುಕಿದ್ದವರಿಗೆ 1 ಲಕ್ಷ ರೂ. ನೆರವು:
ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಣೆ ಮಾಡಿದ ಬೆನ್ನಲ್ಲೇ ಎಲ್ಲ ಕಾರ್ಮಿಕರಿಗೆ 1 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಾಗುವುದು ಎಂದು ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಘೋಷಿಸಿದ್ದಾರೆ. ಈ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದಲ್ಲದೇ ಕಾರ್ಮಿಕರು ಗುಣಮುಖರಾಗಿ ಮನೆಗೆ ಮರಳುವ ವರೆಗೂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸಂಪೂರ್ಣ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
#WATCH | The first worker among the 41 workers trapped inside the Silkyara tunnel in Uttarakhand since November 12, has been successfully rescued. pic.twitter.com/Tbelpwq3Tz
— ANI (@ANI) November 28, 2023