ತುಮಕೂರು: ಮನೆಯೊಂದರ ಕಬ್ಬಿಣದ ಗ್ರಿಲ್ ನಲ್ಲಿ ಸಿಲಿಕಿಕೊಂಡು ನರಳಾಡುತ್ತಿದ್ದ ಕೊಳಕುಮಂಡಲ ಹಾವನ್ನು ರಕ್ಷಿಸಿದ ಘಟನೆ ತೂಮಕೂರಿನ ಸರಸ್ವತಿಪುರದಲ್ಲಿ ಘಟನೆ ನಡೆದಿದೆ.
ನಗರದ ಸರಸ್ವತಿಪುರದಲ್ಲಿರುವ ರಾಜಶೇಖರ ಎಂಬುವವರ ಮನೆಗೆ ಕಾಂಪೌಂಡ್ ಗೆ ಅಳವಡಿಸಿದ್ದ ಕಬ್ಬಿಣದ ಗ್ರಿಲ್ ನಲ್ಲಿ ಸುಮಾರು ನಾಲ್ಕು ಅಡಿ ಉದ್ದದ ಕೊಳಕುಮಂಡಲ ಹಾವು ಸಿಲುಕಿ ನರಳಾಡುತ್ತಿದ್ದುದ್ದನ್ನು ಕಂಡ ಮನೆಯ ಮಾಲೀಕರು ಕೂಡಲೇ ಉರಗ ತಜ್ಞರನ್ನು ಕರೆಸಿ ಹಾವನ್ನು ರಕ್ಷಿಸಲು ತಿಳಿಸಿದ್ದಾರೆ.
ಇದನ್ನೂ ಓದಿ: ಹಾಸ್ಟೆಲ್‌ನಲ್ಲಿ ಚಿತ್ರಾನ್ನ ತಿಂದ 23 ವಿದ್ಯಾರ್ಥಿಗಳು ಅಸ್ವಸ್ಥ
ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಮನು, ಮೊದಲು ಹಾವನ್ನು ಪಾರದರ್ಶಕವಾದ ಪ್ಲಾಸ್ಟಿಕ್ ಪೈಪ್ ಸಹಾಯದಿಂದ ಮುಖದ ಭಾಗದಿಂದ ಹಾವಿನ ಅರ್ಧದಷ್ಟು ದೇಹವನ್ನು ಪೈಪ್ ಒಳಗೆ ಸೇರಿಸಿದ್ದಾರೆ, ಬಳಿಕ ಹಾವು ಸಿಲುಕಿಕೊಂಡಿದ್ದ ಗ್ರಿಲ್ ಅನ್ನು ಕತ್ತರಿಸಿ ರಕ್ಷಣೆ ಮಾಡಿ ಒಂದು ಚೀಲದ ಒಳಗೆ ಹಾಕಿ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದಿದ್ದಾರೆ. ಇದರೊಂದಿಗೆ ಇಲ್ಲಿನ ಸ್ಥಳೀಯರು ಹಾವಿನ ಭಯದಿಂದ ಕೊಂಚ ನಿರಾಳರಾಗಿದ್ದಾರೆ.