Monday, January 6, 2025

ರಾಕ್​ಲೈನ್​ ವೆಂಕಟೇಶ್​ ತಮ್ಮನ ಮನೆಯಲ್ಲಿ ಕಳ್ಳತನ: ಖತರ್ನಾಕ್ ನೇಪಾಳಿ ರಾಬರಿ ಗ್ಯಾಂಗ್ ಅಂದರ್

ಬೆಂಗಳೂರು: ಸ್ಯಾಂಡಲ್‌ವುಡ್‌ ನಿರ್ಮಾಪಕ ಹಾಗೂ ನಟ ರಾಕ್‌ಲೈನ್‌ ವೆಂಕಟೇಶ್‌ ಅವರ ಸಹೋದರನ ಮನೆ ಕಳ್ಳತನ ಪ್ರಕರಣದ ಆರೋಪಿಗಳನ್ನ ಬಂಧಿಸಲಾಗಿದೆ.

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಪ್ರಕರಣ ಭೇದಿಸಿದ್ದು, ಕಳ್ಳತನ ಮಾಡಿದ್ದ ನೇಪಾಳಿ ಗ್ಯಾಂಗ್ ಅನ್ನು ಬಂಧಿಸಿದ್ದಾರೆ. ರಾಕ್‌ಲೈನ್‌ ವೆಂಕಟೇಶ್‌ ಅವರ ತಮ್ಮ ಭ್ರಮರೇಶ್ ಅವರು ಕುಟುಂಬ ಸಮೇತ ಕಳೆದ ತಿಂಗಳು ಯುರೋಪ್​ಗೆ ಪ್ರವಾಸ ಹೋಗಿದ್ದ ವೇಳೆ ಮನೆ ಕಳ್ಳತನವಾಗಿತ್ತು. ಈ ಸಂಬಂಧ ಇದೀಗ ಪೊಲೀಸರು, 7 ಆರೋಪಿಗಳ‌ ತಂಡವನ್ನು ಅರೆಸ್ಟ್ ಮಾಡಿದ್ದು, ಬಂಧಿತರಿಂದ ಸುಮಾರು ಮೂರು ಕೆ.ಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ತಾಯಿಯನ್ನು ಬೈದ ಅಜ್ಜನಿಗೆ ಚಾಕು ಇರಿದು ಕೊಂದ ಮೊಮ್ಮಗ!

ಇನ್ನು, ಈ ನೇಪಾಳಿ ಗ್ಯಾಂಗ್ ದರೋಡೆ ಮಾಡಲು ಬರೋಬ್ಬರಿ ಮೂರು ತಿಂಗಳುಗಳ ಕಾಲ ಸ್ಕೆಚ್​ ಹಾಕಿತ್ತು ಎಂದು ತಿಳಿದುಬಂದಿದೆ. ಭ್ರಮರೇಶ್ ಅವರ ನಿವಾಸದ ಪಕ್ಕದ ನಿರ್ಮಾಣ ಹಂತದ ಕಟ್ಟಡದಲ್ಲಿ ಕುಳಿತುಕೊಂಡು ಮನೆ ದರೋಡೆಗೆ ಪ್ಲ್ಯಾನ್ ಮಾಡಿದ್ದರು ಎನ್ನುವ ಸ್ಫೋಟಕ ಮಾಹಿತಿ ತನಿಖೆ ವೇಳೆ ಲಭ್ಯವಾಗಿದೆ.

RELATED ARTICLES

Related Articles

TRENDING ARTICLES