Wednesday, January 22, 2025

ನಟಿ ಲೀಲಾವತಿ ಆರೋಗ್ಯ ಏರುಪೇರು : ವಿನೋದ್​ ರಾಜ್​ ರನ್ನು ತಬ್ಬಿ ಧೈರ್ಯ ತುಂಬಿದ ಶಿವಣ್ಣ!

ನೆಲಮಂಗಲ: ಹಿರಿಯ ನಟಿ ಡಾ.ಲೀಲಾವತಿಯವರ ಆರೋಗ್ಯ ಸ್ಥಿತಿ ಏರು ಪೇರಾಗುತ್ತಿರುವ ಹಿನ್ನೆಲೆ ಇಂದು ನಟ ಶಿವರಾಜ್​ ಕುಮಾರ್​ ದಂಪತಿ ಸಮೇತರಾಗಿ ತಾಲೂಕಿನ ಸೋಲದೇವನಹಳ್ಳಿಯಲ್ಲಿರುವ ಲೀಲಾವತಿ ತೋಟದ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು ಬಳಿಕ ನಟ ವಿನೋದ್​ ರಾಜ್ ರನ್ನು ತಬ್ಬಿ ಧೈರ್ಯ ತುಂಬಿದರು.

ಈ ಕುರಿತು ಮಾದ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ತಾಯಿ ಬೇರೆ ಅಲ್ಲ. ವಿನೋದ್ ತಾಯಿ ಬೇರೆ ಅಲ್ಲ, ಅವರ ಆರೋಗ್ಯದ ವಿಚಾರ ತಿಳಿದು ಇಂದು, ಅವರ ಆರೋಗ್ಯ ವಿಚಾರಿಸುವ ಸಲುವಾಗಿ ಬಂದಿದ್ದೆ, ಸದ್ಯ ಅವರು ಕಣ್ಣು ಬಿಟ್ಟು ನೋಡಲು ಸಾಧ್ಯವಾಗದಿದ್ದರೂ ನನ್ನ ವಾಯ್ಸ್​ ನಿಂದ ಗುರುತು ಹಿಡಿಯುತ್ತಿದ್ದಾರೆ ಎಂದರು.

ಇದನ್ನೂ ಓದಿ: ನಟಿ ಲೀಲಾವತಿಯವರ ಆರೋಗ್ಯ ದಿನೇ ದಿನೇ ಕ್ಷೀಣಿಸುತ್ತಿದೆ: ಡಿ.ಕೆ ಶಿವಕುಮಾರ್​

ಇದಕ್ಕೂ ಮುನ್ನ ನನ್ನ ಮಗಳ ಮದುವೆ ಕಾರ್ಡ್ ಕೊಡೋಕೆ ವಿನೋದ್ ಮನೆಗೆ ಬಂದಿದ್ದೆ. ನಾವು ದಿನ ಸಿಗಲ್ಲ.  ಆದರೆ ಸಿಕ್ಕಾಗ ಆ ಕ್ಷಣ ನಮ್ಮದು ಎಂದು ತಿಳಿಸಿದರು. ಇನ್ನು ಇದೇ ವೇಳೆ ಶಿವಣ್ಣ, ವಿನೋದ್​​ ರಾಜ್​ ರನ್ನು ತಬ್ಬಿ ಧೈರ್ಯ ತುಂಬಿದರು.

RELATED ARTICLES

Related Articles

TRENDING ARTICLES