Wednesday, January 22, 2025

ಟ್ರಾನ್ಸ್‌ಫರ್‌ ಬಗ್ಗೆ ‘ಕೈ’ ನಾಯಕನ ಸ್ಫೋಟಕ ಆಡಿಯೋ ವೈರಲ್​!

ಬೆಂಗಳೂರು: ರಾಜ್ಯದಲ್ಲಿ ಎಗ್ಗಿಲ್ಲದೇ ಟ್ರಾನ್ಸ್‌ಫರ್ ದಂಧೆ ನಡೆಯುತ್ತಿದ್ಯಾ ಎಂಬ ಅನುಮಾನ ಮೂಡಿದ್ದು, ಟ್ರಾನ್ಸ್‌ಫರ್‌ ಬಗ್ಗೆ ಕಾಂಗ್ರೆಸ್​ ನಾಯಕನ ಸ್ಫೋಟಕ ಆಡಿಯೋ ವೈರಲ್​ ಆಗಿದೆ.

ಕಾಂಗ್ರೆಸ್​ ನಾಯಕ ಉಮಾಪತಿಗೌಡ ಸಾಮಾಜಿಕ ಕಾರ್ಯಕರ್ತ ವಿಜಯ್ ಡೆನ್ನಿಸ್​ ಜೊತೆ ಸಂಭಾಷಣೆ ನಡೆಸಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇನ್ಸ್‌ಪೆಕ್ಟರ್‌ ಟ್ರಾನ್ಸ್‌ಫರ್‌ಗೆ ಉಮಾಪತಿಗೌಡ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ಸಿಎಂ ಜನಸ್ಪಂದನೆಗೆ ಅಹವಾಲು ಹೊತ್ತು ಹರಿದು ಬಂದ ಜನರು: ಸ್ಥಳದಲ್ಲೆ ಪರಿಹಾರಕ್ಕೆ ಸಿಎಂ ಸೂಚನೆ

ಅದೇ ಠಾಣೆಯಲ್ಲಿ ಉಳಿಸಲು ಇನ್ಸ್‌ಪೆಕ್ಟರ್‌ ಹಣ ನೀಡಿದ್ದಾರೆ. ಈ ಹಣವನ್ನ ಹೋಂ ಮಿನಿಸ್ಟರ್‌ಗೆ ಕೊಟ್ಟಿರೋ ಬಗ್ಗೆ ಆಡಿಯೋದಲ್ಲಿ ಪ್ರಸ್ತಾಪ ಮಾಡಲಾಗಿದೆ. ಸಚಿವರಿಗೆ ಹಣ ಕೊಟ್ಟಿರೋದಾಗಿ ಉಮಾಪತಿಗೌಡ ಹೇಳಿದ್ದಾರೆ. ನಾನು ಹೇಳಿದರೇ ನಮ್ಮ ಸರ್ಕಾರದಲ್ಲಿ ಕೆಲಸ ಆಗೇ ಆಗುತ್ತೆ ಎಂದು ಕಾಂಗ್ರೆಸ್​ ನಾಯಕ ಉಮಾಪತಿಗೌಡ ಹೇಳಿದ್ದಾರೆ.

RELATED ARTICLES

Related Articles

TRENDING ARTICLES