Friday, December 27, 2024

ಸೈನಿಕರನ್ನು ಬಲಿ ಪಡೆದ ಕೀರ್ತಿ ಮೋದಿ ಸರ್ಕಾರಕ್ಕೆ ಸಲ್ಲುತ್ತೆ: ಶಾಸಕ ಬಾಲಕೃಷ್ಣ

ರಾಮನಗರ: ಸೈನಿಕರನ್ನು ಬಲಿ ಪಡೆದ ಕೀರ್ತಿ ಮೋದಿ ಸರ್ಕಾರಕ್ಕೆ ಸಲ್ಲುತ್ತೆ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವ ವಿರುದ್ಧ ಮಾಗಡಿ ಕಾಂಗ್ರೆಸ್ ಶಾಸಕ ಹೆಚ್.ಸಿ ಬಾಲಕೃಷ್ಣ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮಾಗಡಿ ತಾಲೂಕಿನ ತೂಬಿನಕೆರೆ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಸೈನಿಕರನ್ನು ಬಲಿ ಪಡೆದ ಕೀರ್ತಿ ಮೋದಿ ಸರ್ಕಾರಕ್ಕೆ ಸಲ್ಲುತ್ತೆ. ಬಿಜೆಪಿಯವರು ಬ್ರಿಟಿಷರಿದ್ದಂತೆ, ಜನರ ಮಧ್ಯೆ ಗುಂಪು ಕಟ್ಟಿ, ಎತ್ತಿಕಟ್ಟುವ ಕೆಲಸ ಮಾಡುತ್ತಾರೆ ಎಂದು ಹೇಳುವ ಮೂಲಕ ಬಾಲಕೃಷ್ಣ ಅವರು ಬಿಜೆಪಿಯನ್ನು ಬ್ರಿಟೀಷರಿಗೆ ಹೋಲಿಕೆ ಮಾಡಿದರು.

ಇದೇ ವೇಳೆ ಕುಮಾರಣ್ಣ ಮಾತೆತ್ತಿದ್ರೆ ನಾವು ಜಾತ್ಯಾತೀತ ಅಂತಾರೆ. ಆದರೆ ದೇವೇಗೌಡರು ಸಾಯುವ ಕಾಲದಲ್ಲಿ ಕೋಮುವಾದ ಮಾಡುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಎಸ್‍ಪಿಗೆ ಬಂದ ಗತಿ, ಕರ್ನಾಟಕದಲ್ಲಿ ಜೆಡಿಎಸ್ ಬರುತ್ತೆ. ಆ ರೀತಿ ಜೆಡಿಎಸ್ ಪಕ್ಷವನ್ನ ಬಿಜೆಪಿಯವರು ಮಾಡದಿದ್ದರೆ, ನಾನು ನನ್ನ ಹೆಸರು ಬದಲಾಯಿಸಿಕೊಳ್ತೀನಿ. ಜೆಡಿಎಸ್ ಎಚ್ಚೆತ್ತುಕೊಳ್ಳದಿದ್ದರೆ ಸಂಪೂರ್ಣ ಅಸ್ಥಿತ್ವವೇ ಮುಗಿಯುತ್ತೆ ಎಂದು ಶಾಸಕರು ಬಿಜೆಪಿ-ಜೆಡಿಎಸ್ ಮೈತ್ರಿಗೆ ಕಿಡಿಕಾರಿದರು.

RELATED ARTICLES

Related Articles

TRENDING ARTICLES