Monday, December 23, 2024

ಈ ವಾರ ಅತಿ ಹೆಚ್ಚು ವೋಟ್‌ ಯಾರಿಗೆ..? ಇವರೇ ನೋಡಿ ಬಿಗ್‌ ಬಾಸ್‌ 10 ರ ವಿನ್ನರ್‌!

ಬೆಂಗಳೂರು: ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಸುದೀಪ್ ಪ್ರಾರಂಭಿಸಿದ್ದು, ಸ್ಪರ್ಧಿಗಳಿಗೆ ಬಂದಿರುವ ಮತಗಳ ಆಧಾರದಲ್ಲಿ ನಾಮಿನೇಟ್ ಆದವರನ್ನು ಸೇವ್ ಮಾಡಿದ್ದಾರೆ. 

ಹೌದು,ಮನೆಯ ಒಳಗೆ ಸ್ಪರ್ಧಿಗಳ ನಡುವೆ ಒಬ್ಬರ ಮೇಲೆ ಒಬ್ಬರು ಕೆಳಗೆ ಇರಬಹುದು ಆದರೆ ಕೊನೆಗೆ ಅಂತಿಮ ತೀರ್ಪು ಜನರದ್ದೇ ಆಗಿರುತ್ತದೆ. ಜನ ಯಾರಿಗೆ ಮತ ಹೆಚ್ಚು ಹಾಕುತ್ತಾರೋ ಅವನೇ ಬಿಗ್​ಬಾಸ್​ನಲ್ಲಿ ಬಾಸ್. ಇದೀಗ ವೀಕೆಂಡ್​ ಪಂಚಾಯಿತಿಯ ಮೊದಲ ದಿನ ಎಲಿಮಿನೇಷನ್ ಪ್ರಕ್ರಿಯೆಯನ್ನು ಸುದೀಪ್ ಪ್ರಾರಂಭಿಸಿದ್ದು, ಸ್ಪರ್ಧಿಗಳಿಗೆ ಬಂದಿರುವ ಮತಗಳ ಆಧಾರದಲ್ಲಿ ನಾಮಿನೇಟ್ ಆದವರನ್ನು ಸೇವ್ ಮಾಡಿದ್ದಾರೆ. ಈ ಮೂಲಕ ಮನೆಯ ಸದಸ್ಯರಲ್ಲಿ ಯಾರನ್ನು ಜನ ಹೆಚ್ಚು ಇಷ್ಟಪಟ್ಟಿದ್ದಾರೆ ಎಂಬುದು ಮನೆಯವರಿಗೂ ತಿಳಿದು ಬಂದಿದೆ.

ಈ ಬಾರ ನಾಮಿನೇಟ್ ಆದವರಲ್ಲಿ ಅತಿ ಹೆಚ್ಚು ಮತ ಬಂದಿರುವುದು ಡ್ರೋನ್ ಪ್ರತಾಪ್​ಗೆ ಹಾಗಾಗಿ ಅವರು ಮೊದಲು ಸೇಫ್ ಆದರು. ಅಸಲಿಗೆ ಪ್ರತಾಪ್ ಅವರನ್ನು ಮನೆಯಲ್ಲಿ ಕೆಲವು ಸ್ಪರ್ಧಿಗಳು ಕ್ಷುಲ್ಲಕವಾಗಿ ಕಾಣುತ್ತಾರೆ, ಕಡೆಗಣ್ಣಿನಿಂದ ನೋಡುತ್ತಾರೆ. ಆದರೆ ಹೊರಗಡೆ ಜನರಿಗೆ ಅತಿ ಹೆಚ್ಚು ಇಷ್ಟವಾಗಿರುವುದು ಡ್ರೋನ್ ಪ್ರತಾಪ್. ನಂತರ ತನಿಷಾ,ಸಂಗೀತಾ,ವಿನಯ್ ಸೇವ್ ಆಗಿದ್ಧಾರೆ.

ಇದನ್ನೂ ಓದಿ: ಟ್ರಾಫಿಕ್ ಸಿಗ್ನಲ್ ಬ್ಯಾಟರಿ ಕದಿಯುತ್ತಿದ್ದ ಖತರ್ನಾಕ್‌ ಖದೀಮರು ಅರಸ್ಟ್

ಇನ್ನು ಎಲಿಮಿನೇಷನ್ ಪಟ್ಟಿಯಲ್ಲಿ ಸಿರಿ, ಸ್ನೇಹಿತ್, ನಮ್ರತಾ, ನೀತು ಹಾಗೂ ತುಕಾಲಿ ಅವರುಗಳು ಇದ್ದಾರೆ. ಇವರಲ್ಲಿ ಅತಿ ಹೆಚ್ಚು ಮತ ಯಾರಿಗೆ ಬಂದಿದೆ ಎಂಬುದನ್ನು ಭಾನುವಾರದ ಎಪಿಸೋಡ್​ನಲ್ಲಿ ಸುದೀಪ್ ಹೇಳಲಿದ್ದಾರೆ. ಈ ವಾರ ನಾಮಿನೇಟ್ ಆಗದಿದ್ದ ಕಾರ್ತಿಕ್, ತುಕಾಲಿ, ಮೈಖಲ್ ಅವರಿಗೆ ಎಷ್ಟು ಮತಗಳು ಬಂದಿವೆ ಎಂಬ ಬಗ್ಗೆ ಮಾಹಿತಿ ಇಲ್ಲ.

RELATED ARTICLES

Related Articles

TRENDING ARTICLES