Saturday, January 11, 2025

ಬೆಳಗಾವಿ ಅಧಿವೇಶನಕ್ಕೆ ಭರದ ಸಿದ್ದತೆ: ಸಿಂಗಾರಗೊಳ್ಳುತ್ತಿರುವ ಪ್ರತಿಮೆಗಳು!

ಬೆಳಗಾವಿ: ಚಳಿಗಾಲದ ಅಧಿವೇಶನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆ ಅಧಿವೇಶನಕ್ಕೆ ಸುವರ್ಣ ವಿಧಾನಸೌಧದಲ್ಲಿ ನೂತನ ಪ್ರತಿಮೆಗಳ ಅಲಂಕಾರಕ್ಕೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.

ಈಗಾಗಲೇ ಸುವರ್ಣ ವಿಧಾನ ಸೌಧದ ಮುಂಭಾಗ ಕಿತ್ತೂರು ರಾಣಿ ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಪ್ರತಿಮೆಗಳನ್ನು ನಿಲ್ಲಿಸಲಾಗಿದೆ. ಅಧಿವೇಶನ ವೇಳೆಗೆ ಮಹನೀಯರ ಪ್ರತಿಮೆಗಳಿಗೆ ಅಲಂಕಾರ ಮಾಡುವ ಕಾಮಗಾರಿ ಭರದಿಂದ ಸಾಗಿದೆ. ಕಾರ್ಮಿಕರು ಹೊಸದಾಗಿ ಪ್ರತಿಮೆಗಳ ಸ್ವಚ್ಛತೆ, ಪೇಂಟಿಂಗ್‌ ಆರಂಭಿಸಿದ್ದಾರೆ. ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರೇ ಆಸಕ್ತಿ ವಹಿಸಿ ಈ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ.

ಇದನ್ನೂ ಓದಿ: ಕಾರ್ಯಕರ್ತರು ಯಾವುದಕ್ಕೂ ಅಂಜಬೇಕಿಲ್ಲ: ಬಿ.ವೈ.ವಿಜಯೇಂದ್ರ

ಮೂರೂ ಪ್ರತಿಮೆಗಳ ಸುತ್ತ ಪ್ರತ್ಯೇಕ ವೃತ್ತ ಮಾಡಿ, ಕಾಂಪೌಂಡ್ ಕೂಡ ಕಟ್ಟಲಾಗುತ್ತಿದೆ. ಅದರ ಒಳಭಾಗದಲ್ಲಿ ಮಿನಿ ಗಾರ್ಡನ್ ಸಿದ್ದಗೊಳ್ಳಲಿದೆ. ಲೈಟಿಂಗ್ ಹಾಗೂ ಮಾಲಾರ್ಪಣೆ ಮಾಡಲು ಅನುಕೂಲ ಆಗುವಂಥ ಕೆಲಸಗಳನ್ನೂ ಕೈಗೆತ್ತಿಕೊಳ್ಳಲಾಗಿದೆ. ಸುವರ್ಣ ಸೌಧ ನೋಡಲು ಬರುವವರು ಈ ಪ್ರತಿಮೆಗಳನ್ನೂ ನೋಡುವಂತೆ ಅಂದ ಹೆಚ್ಚಿಸಲು ಉದ್ದೇಶಿವಿದಾಗಿದೆ.

RELATED ARTICLES

Related Articles

TRENDING ARTICLES