Monday, December 23, 2024

ತನ್ನಿಬ್ಬರು ಮಕ್ಕಳನ್ನು ಬಸ್​ ಸ್ಟಾಪ್​ ನಲ್ಲಿ ಬಿಟ್ಟು ಸಮುದ್ರಕ್ಕೆ ಹಾರಿದ ಮಹಿಳೆ!

ಉತ್ತರ ಕನ್ನಡ: ತನ್ನಿಬ್ಬರು ಮಕ್ಕಳನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಮಹಿಳೆಯೊಬ್ಬರು ಸಮುದ್ರಕ್ಕೆ ಹಾರಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ನಡೆದಿದೆ.

ನಿವೇದಿತಾ ನಾಗರಾಜ ಭಂಡಾರಿ ಸಮುದ್ರಕ್ಕೆ ಹಾರಿ ಕಣ್ಮರೆಯಾಗಿರುವ ವಿವಾಹಿತೆ, ಸಾಂತಗಲ್​ ಗ್ರಾಮದ ನಿವಾಸಿಯಾಗಿದ್ದ ನಿವೇದಿತಾ ತನ್ನ ಮನೆಯಿಂದ ಸ್ಕೂಟಿಯಲ್ಲಿ ತನ್ನಿಬ್ಬರು ಗಂಡು ಮಕ್ಕಳನ್ನು ಕರೆತಂದು ಕುಮಟಾದ ಪಿಕ್ ಅಪ್ ಬಸ್ ನಿಲ್ದಾಣದ ಬಳಿ ಬಿಟ್ಟು ತೆರಳಿದ್ದಾರೆ.

ಇದನ್ನೂ ಓದಿ: ಟ್ರಾಫಿಕ್ ಸಿಗ್ನಲ್ ಬ್ಯಾಟರಿ ಕದಿಯುತ್ತಿದ್ದ ಖತರ್ನಾಕ್‌ ಖದೀಮರು ಅರಸ್ಟ್

ಆತ್ಮಹತ್ಯೆಗೂ ಮುನ್ನ ತನ್ನ ಕೊರಳಲ್ಲಿದ್ದ ಚಿನ್ನದ ಮಾಂಗಲ್ಯ ಸರ, ಕಾಲುಂಗುರ, ಮೊಬೈಲ್​ ಇಟ್ಟು ತೆರಳಿದ್ದಾರೆ. ಬಳಿಕ ಕುಮಟಾದ ಹೆಡ್​ ಬಂದರ್​ ಬಳಿ ಸಮುದ್ರದಕ್ಕೆ ಹಾರಿದ್ದಾರೆ. ಮಹಿಳೆಯೂ ಸಮುದ್ರಕ್ಕೆ ಹಾರುವುದನ್ನು ಗಮನಿಸಿ ಸ್ಥಳಿಯರು ಕೂಡಲೆ ರಕ್ಷಣೆಗೆ ಲೈಫ್​ಗಾರ್ಡ್​ ಗಳಿಗೆ ತಿಳಿಸಿದ್ದಾರೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿದ್ದ ಕಾರಣ ಮಹಿಳೆ ಕಣ್ಮರೆಯಾಗಿದ್ದಾರೆ.

ಸ್ಥಳಕ್ಕೆ ಕುಮಟಾ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES